Asianet Suvarna News Asianet Suvarna News

ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?

ಸಿಪಿವೈ ಬಾವನ ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?
ಕಿಡ್ನ್ಯಾಪ್ ಮಾಡಿ ಅವರ ಕಾರಿನಲ್ಲೇ ಕರೆದುಕೊಂಡು ಹೋದ್ರು..!
ಚನ್ನಪಟ್ಟದಲ್ಲಿ ಮಿಸ್ಸಿಂಗ್,ಚಾಮರಾಜನಗರದಲ್ಲಿ ಹೆಣ ಪತ್ತೆ..!

ಅವರು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ರವರ(CP Yogeshwar) ಬಾವ.. ಬೆಂಗಳೂರಿನಲ್ಲಿ(Bengaluru) ಹೆಂಡತಿ ಮಕ್ಕಳನ್ನ ಬಿಟ್ಟು ಹೆಚ್ಚು ಕಾಲ ತಮ್ಮ ಚೆನ್ನಪಟ್ಟಣದ(Chennapattana) ತೋಟದ ಮನೆಯಲ್ಲೇ ವಾಸವಾಗಿದ್ರು. ಆದ್ರೆ ಆವತ್ತು ಅದೇ ತೋಟದ ಮನೆಯಿಂದ ಅವರು ಕಿಡ್ನ್ಯಾಪ್ ಆಗಿದ್ರು.ರಾತ್ರಿ 8 ಗಂಟೆಗೆ ಮನೆಯಲ್ಲಿದ್ದವರು 11 ಗಂಟೆ ಹೊತ್ತಿಗೆ ಮಿಸ್ಸಿಂಗ್ ಆಗಿದ್ರು. ಅವರ ಕಾರ್(Car) ಕೂಡ ಇರಲಿಲ್ಲ. ಈ ಘಟನೆಯಿಂದ ಇಡೀ ಸಿಪಿ ಯೋಗೇಶ್ವರ್ ಕುಟುಂಬ ಆತಂಕಗೊಳ್ಳುತ್ತೆ. ಪೊಲೀಸ್(Police) ಕಂಪ್ಲೆಂಟ್ ಕೂಡ ದಾಖಲಾಗುತ್ತೆ.. ಆದ್ರೆ ಏನಾಯ್ತು ಅವರಿಗೆ ಅಂತ ತಲೆಕೆಡಸಿಕೊಳ್ಳುತ್ತಿದ್ದವರಿಗೆ ಸಿಪಿವೈ ಬಾವನ ಕಾರ್ ಚಾಮರಾಜನಗರದಲ್ಲಿ ಪತ್ತೆಯಾಗುತ್ತೆ. ಅದಾಗಿ ಕೆಲವೇ ಗಂಟೆಗಳಲ್ಲಿ ಅವರ ಮೃತದೇಹ ಕೂಡ ರಾಮಾಪುರ ಕಾಡಿನಲ್ಲಿ ಸಿಗುತ್ತೆ. ಹೀಗೆ ಫೋನ್ ರಿಸೀವ್ ಮಾಡಿದವನು ತಕ್ಷಣವೇ ಕಾಲ್ ಮಾಡಿದಾಗ ಮಹದೇವಯ್ಯರಿಗೇ ಏನೋ ಆಗಿದೆ ಅನ್ನೋದು ಕನ್ಫರ್ಮ್ ಆಯ್ತು. ಇನ್ನೂ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹದೇವಯ್ಯ ಮೊಬೈಲ್ ಮತ್ತು ಕಾರ್ ಚಾಮರಾಜನಗರದಲ್ಲಿದೆ ಅನ್ನೋದು ಕಾತ್ರಿಯಾಗಿ ಅಲ್ಲಿಗೆ ತೆರಳುತ್ತಾರೆ. ಪರಿಸ್ಥಿತಿ ಹೇಗಿರುವಾಗ್ಲೇ ಚಾಮರಾಜ ನಗರದಲ್ಲಿದ್ದ ಒಬ್ಬ ಯುವಕ ಪೊಲೀಸರಿಗೆ ಒಂದು ಶಾಕಿಂಗ್ ಮಾಹಿತಿ ಕೊಡ್ತಾನೆ. ಮಹದೇವಯ್ಯರ ಕಾರ್ ಲೊಕೇಷನ್ ಪೊಲೀಸರಿಗೆ ತಿಳಿಸುತ್ತಾನೆ. ಮಹದೇವಯ್ಯ ಕಿಡ್ನ್ಯಾಪ್ ಆದ ನಂತರ ಅವರ ಸುಳಿವಿಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಮೇಜರ್ ಕ್ಲೂ ಕೊಟ್ಟಿದ್ದು ಒಂದು ವಾಟ್ಸಪ್ ಗ್ರೂಪ್.ಚೆನ್ನಪಟ್ಟಣ ಬಾಯ್ಸ್ ಗ್ರೂಪ್ನಲ್ಲಿ ಚಾಮರಾಜನಗರದ ಹುಡುಗ ಮಹದೇವಯ್ಯರ ಕಾರಿನ ಲೊಕೇಷನ್ ಕಳಿಸಿದ್ದ. ನಂತರ ಪೊಲೀಸರು ಅಲ್ಲಿಗೆ ಹೋದಾಗ ಮಹದೇವಯ್ಯರ ಕಾರ್ ಪತ್ತೆಯಾಗಿತ್ತು. ಅಷ್ಟೇ ಅಲ್ಲ ಕಾರ್ನಲ್ಲಿ ರಕ್ತದ ಕಲೆ ಕೂಡ ಕಾಣಿಸಿತ್ತು. ಇದನ್ನ ನೋಡಿದ ಪೊಲೀಸರಿಗೆ ಮಹದೇವಯ್ಯ ಬದುಕಿರೋದು ಡೌಟ್ ಅಂತನ್ನಿಓಕೆ ಶುರುವಾಯ್ತು.. ತಡಮಾಡದೇ ಆ ಕಾರ್ ಓಡಾಡಿದ ಮಾರ್ಗದ ಸಿಸಿಟಿವಿ ಪರಿಶಿಲಿಸಿದ್ರು.. ಆಗ ಸಿಕ್ಕಿದ್ದೇ ರಾಮಾಪುರ ಕಾಡು ಅದೇ ಕಾಡಿನಲ್ಲಿ ಹುಡುಕಾಡಿದಾಗ ಮಹಯದೇವಯ್ಯರ ಮೃತದೇಹ ಸಿಕ್ಕಿತ್ತು.

ಇದನ್ನೂ ವೀಕ್ಷಿಸಿ:  ಸಿಬ್ಬಂದಿ ಯಡವಟ್ಟಿನಿಂದ ಮೃತಪಟ್ಟನಾ ಅರ್ಜುನ? ಕಾಡಾನೆ ಎದುರು ಬಲ ಕಳೆದುಕೊಂಡು ಬಲಿ?

Video Top Stories