ಏನಿದು ಪುರಿ ರತ್ನ ಭಂಡಾರ ವಿವಾದ..! ಓಡಿಶಾದಲ್ಲಿ ವಿ.ಕೆ ಪಾಂಡಿಯನ್ ಟಾರ್ಗೆಟ್ ಮಾಡ್ತಾ ಕೇಸರಿಪಡೆ..?
'ಜಗನ್ನಾಥನ ರತ್ನಭಂಡಾರದ ಕೀಲಿ ತಮಿಳುನಾಡಿನಲ್ಲಿದ್ದರೆ ತನಿಖೆ ನಡೆಸಲಿ’
‘ಕೀಲಿ ಕೈ ತಮಿಳುನಾಡಿಗೆ ಹೋಗಿದ್ದರೆ ಕೇಂದ್ರ ಸರ್ಕಾರವೇ ಪತ್ತೆ ಮಾಡಲಿ’
‘ಬಿಜೆಪಿ ಬಳಿ ಅಧಿಕಾರವಿದೆ, ಹೀಗಾಗಿ ಅವರೇ ತನಿಖೆ ನಡೆಸಿ ಪತ್ತೆ ಹಚ್ಚಲಿ’
ಓಡಿಶಾ ಚುನಾವಣಾ ಅಖಾಡದಲ್ಲಿ ಪುರಿ ಜಗನ್ನಾತ ರತ್ನ ಭಂಡಾರ(Jagannath Temple Ratna Bhandar) ಕೀಲಿ ಕೈ ವಿವಾದ ಜೋರಾಗಿದೆ. ಓಡಿಶಾದಲ್ಲಿ(Odisha) ಪ್ರಧಾನಿ ನರೇಂದ್ರ ಮೋದಿ(Narendra Modi)ಭಾಷಣ ಮಾಡಿರುವುದು ತಮಿಳುನಾಡಿನಲ್ಲೂ(Tamil Nadu) ಸಂಚಲನ ಮೂಡಿಸಿದೆ. ಪುರಿ ಶ್ರೀರತ್ನ ಭಂಡಾರದ ಕೀಲಿ(Key) ತಮಿಳುನಾಡಿಗೆ ಹೋಗಿದೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಪಟ್ನಾಯಕ್ ಉತ್ತರಾಧಿಕಾರಿ ಪಾಂಡಿಯನ್ನೇ ಮೋದಿ ಟಾರ್ಗೆಟ್ ಮಾಡಿದ್ದಾರೆ. ಓಡಿಶಾಗೆ ತಮಿಳಿಗನ್ನ ಪಟ್ನಾಯಕ್(Naveen Patnaik) ರಾಜನಾಗಿಸಿದ್ದಾರೆ ಎಂದು ಅಮಿತ್ ಶಾ ಕಿಡಿಕಾರಿದ್ದಾರೆ. ವಿ.ಕೆ ಪಾಂಡಿಯನ್, ತಮಿಳುನಾಡು ಮೂಲದ ಐಎಎಸ್ ಅಧಿಕಾರಿಯಾಗಿದ್ದು, ಪಾಂಡಿಯನ್ನನ್ನೇ ಉತ್ತರಾಧಿಕಾರಿಯೆಂದು CM ಪಟ್ನಾಯಕ್ ಘೋಷಿಸಿದ್ದಾರೆ. ರತ್ನ ಭಂಡಾರ ಕೀಲಿ ಕೈ ನಾಪತ್ತೆ ಹೆಸರಲ್ಲಿ ಪಟ್ನಾಯಕ್ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮದೇ ಸರ್ಕಾರದ ಇದೆ, ತನಿಖೆ ಮಾಡ್ಸಿ ಎಂದು ಪಾಂಡಿಯನ್ ಸವಾಲು ಹಾಕಿದ್ದಾರೆ. ತಮಿಳರ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಎಂಕೆ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ..? ಪೊಲೀಸರನ್ನ ಮನೆಯೊಳಗೆ ಬಿಡದೇ ತಳ್ಳಾಟ..ನೂಕಾಟ..!