ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯಿಂದಲೇ ಕಳ್ಳಾಟ: ಕೈದಿಗಳಿಗೆ ಮೊಬೈಲ್ ಸಪ್ಲೈ ..!
ಜೈಲಿನಲ್ಲಿ ನಡೆಯೋ ಅಕ್ರಮಗಳಿಗೆ ಕೆಲವು ಸಿಬ್ಬಂದಿಗಳ ಸಾಥ್
ಹಣದ ಆಸೆಗೆ ಸಿಬ್ಬಂದಿಯಿಂದ ಮೊಬೈಲ್,ಮಾದಕ ವಸ್ತುಗಳ ಪೂರೈಕೆ
ಜೈಲಿನಲ್ಲಿ ಖೈದಿಗಳ ಬಳಿ ಹಣ ಪಡೆದು ನಿಷೇಧಿತ ವಸ್ತುಗಳ ಪೂರೈಕೆ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು(Parappana Agrahara) ಸಿಬ್ಬಂದಿ ಕೈದಿಗಳಿಗೆ ಮೊಬೈಲ್ ಸಪ್ಲೈ ಮಾಡುತ್ತಿದ್ದಾಗ ಸಕ್ಕಿಬಿದ್ದಿದ್ದಾರೆ. ಒಳಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಮೊಬೈಲ್ ಸಪ್ಲೈ(mobile supply) ಮಾಡಲಾಗುತ್ತಿತ್ತು. ಜೈಲು ಅಧಿಕಾರಿಗಳ ತಪಾಸಣೆ ವೇಳೆ ಈ ಕಳ್ಳಾಟ ಬಯಲಾಗಿದೆ. ಅಧಿಕಾರಿಗಳ ಕೈಗೆ ಚಾಲಕ ಭಾನುಪ್ರಕಾಶ್ ಸಿಕ್ಕಿಬಿದ್ದಿದ್ದಾನೆ. ಇದೇ ಜುಲೈ 25ರಂದು ಕೆಲಸಕ್ಕೆ ಭಾನುಪ್ರಕಾಶ್ ಬಂದಿದ್ದು, ಜೈಲು ಪ್ರವೇಶ ಮಾಡುವಾಗ KSISF ಸಿಬ್ಬಂದಿಯಿಂದ ತಪಾಸಣೆ ನಡೆಸಿದ್ದಾರೆ. ಈ ವೇಳೆ ಒಳಉಡುಪಿನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಕಾರಾಗೃಹ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನರಿಂದ ಈ ಸಂಬಂಧ ದೂರು ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಭಾನುಪ್ರಕಾಶ್ ಬಂಧಿಸಿದ್ದು, ಮೊಬೈಲ್ ಯಾರಿಗೆ ಕೊಡಲು ಹೋಗುತ್ತಿದ್ದ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಮೂಲಕ ಜೈಲಿನಲ್ಲಿ ನಡೆಯೋ ಅಕ್ರಮಗಳಿಗೆ ಕೆಲವು ಜೈಲು ಸಿಬ್ಬಂದಿಯೇ ಸಾಥ್ ನೀಡುತ್ತಿರುವುದಕ್ಕೆ ಸತ್ಯವಾಗಿದೆ.
ಇದನ್ನೂ ವೀಕ್ಷಿಸಿ: ಕರುನಾಡಲ್ಲಿ ಕೊಂಚ ಬ್ರೇಕ್ ಕೊಟ್ಟ ಮಳೆರಾಯ: ತಗ್ಗದ ಪ್ರವಾಹದ ಅವಾಂತರ