Asianet Suvarna News Asianet Suvarna News

ಭಾರತ- ಅಮೆರಿಕಾ ಮಧ್ಯೆ ಆರ್ಟೆಮಿಸ್ ಒಪ್ಪಂದ: ಭೂಮಿ, ನೀರು, ಗಾಳಿ ಆಯ್ತು.. ಅಂತರಿಕ್ಷದಲ್ಲೂ ಭಲೆ ಜೋಡಿ!

ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ಸಜ್ಜಾಯ್ತು ಇಂಡಿಯಾ!
ಮೋದಿ ಅಮೆರಿಕಾ ಯಾತ್ರೆ ಚೀನಾ ಪಾಕ್ ನಿದ್ದೆಗೆಡಿಸಿದ್ದೇಕೆ..?
ಬೆಂಗಳೂರಿಗೂ ಅದೃಷ್ಟ ತಂದಿತು ಪ್ರಧಾನಿ ಮೋದಿ ಪ್ರವಾಸ!

First Published Jun 24, 2023, 3:41 PM IST | Last Updated Jun 24, 2023, 3:41 PM IST

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಯಾತ್ರೆ, ಬರೀ ವಿದೇಶಿ ಪ್ರವಾಸವಲ್ಲ. ಅದು ಮೋದಿ ಹಾಗೂ ಬೈಡನ್ ಅನ್ನೋ, ಇಬ್ಬರು ರಾಜಕೀಯ ನಾಯಕರ ಭೇಟಿಯಾಗಿದೆ. ಮೋದಿ ಅವರ ಅಮೆರಿಕಾ ಯಾತ್ರೆ, ಭಾರತಕ್ಕೆಷ್ಟು ಇಂಪಾರ್ಟಂಟೋ ಅಮೆರಿಕಾಗೂ ಅಷ್ಟೇ ಮುಖ್ಯ. ಅಮೆರಿಕಾಗೆ ಎಷ್ಟು ಅವಶ್ಯಕವೋ, ಭಾರತಕ್ಕೂ ಅಷ್ಟೇ ಅವಶ್ಯಕ. ಪ್ರಧಾನಿ ನರೇಂದ್ರ ಮೋದಿ ಅವರು ಅದಾಗಲೇ ಸಾಕಷ್ಟು ಬಾರಿ ಅಮೆರಿಕಾಗೆ ಭೇಟಿ ಕೊಟ್ಟಿದ್ದಾರೆ. ಆದ್ರೆ ಅದೆಲ್ಲವೂ ರಾಜತಾಂತ್ರಿಕ ಲಾಭ ತಂದುಕೊಟ್ಟಿದ್ದೇ ಹೆಚ್ಚು. ಮೋದಿ ಅವರ ಈ ಸಲದ ಪ್ರವಾಸ ಇದೆಯಲ್ಲಾ ಇದು ನಿಜಕ್ಕೂ ಭಾರತದ ಮಹತ್ವದ ಭೇಟಿಗಳ ಪೈಕಿ ಒಂದಾಗಲಿದೆ. ಒಂದೆಡೆ ಮೋದಿ ಅನ್ನೋ ಎರಡಕ್ಷರದ ಅಬ್ಬರದ ಶಕ್ತಿ, ಮತ್ತೊಂದೆಡೆ ಭಾರತಕ್ಕೆ ವಿಶ್ವವೇದಿಕೆಯಲ್ಲಿ ಸಿಕ್ತಾ ಇರೋ ಗೌರವ-ಮನ್ನಣೆ, ಮಗದೊಂದು ಕಡೆ, ಜಗತ್ತಿನ ಯಾವುದೇ ದೇಶ-ಎಂಥದ್ದೇ ದೇಶ ಏನೇ ಮಾಡ್ಬೇಕು ಅಂದ್ಕೊಂಡ್ರು, ಅದಕ್ಕೆ ಭಾರತದ ಅವಶ್ಯಕತೆ ಎಷ್ಟಿದೆ ಅನ್ನೋದನ್ನ, ಈ ಭೇಟಿ ತೋರಿಸಿಕೊಟ್ಟಿದೆ.

ಇದನ್ನೂ ವೀಕ್ಷಿಸಿ: ಮಲಗಿದ್ದಲ್ಲೇ ಹೆಣವಾಗಿದ್ದ ಮಗ: ಹಾರ್ಟ್ಅಟ್ಯಾಕ್ ಅಂದಳು ಅಮ್ಮ..! ಕೊಲೆ ಅಂದನು ಅಪ್ಪ..!

Video Top Stories