Asianet Suvarna News Asianet Suvarna News

ಮಲಗಿದ್ದಲ್ಲೇ ಹೆಣವಾಗಿದ್ದ ಮಗ: ಹಾರ್ಟ್ಅಟ್ಯಾಕ್ ಅಂದಳು ಅಮ್ಮ..! ಕೊಲೆ ಅಂದನು ಅಪ್ಪ..!

ಎದೆಹಾಲು ಉಣಿಸಿದವಳೇ ಕತ್ತು ಹಿಸುಕಿಬಿಟ್ಟಳಾ..?
ಕೊಲೆ ಮಾಡಿ ಹಾರ್ಟ್ಅಟ್ಯಾಕ್ ಎಂದ ತಾಯಿ
ಕುತ್ತಿಗೆಯಲ್ಲಿದ್ದ ಗಾಯ ತಂದೆಗೆ ಮೂಡಿಸಿತ್ತು ಅನುಮಾನ 

First Published Jun 24, 2023, 3:36 PM IST | Last Updated Jun 24, 2023, 3:36 PM IST

ಅದೊಂದು ಚಿಕ್ಕ ಕುಟುಂಬ, ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಎದೆ ಮಟ್ಟಕ್ಕೆ ಬೆಳದ ಆ ಮಕ್ಕಳು ತಂದೆ ತಾಯಿಗೆ ಸಹಾಯ ಮಾಡಿಕೊಂಡಿದ್ರು. ಆದ್ರೆ ಈ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಏನೋ, ಇವತ್ತು ಆ ಕುಟುಂಬ ಸರ್ವನಾಶವಾಗಿದೆ. ಆವತ್ತು ರಾತ್ರಿ ಮಲಗಿದ್ದ ಮಗ ಬೆಳಗಾಗುವಷ್ಟರಲ್ಲೇ ಹೆಣವಾಗಿ ಹೋಗಿದ್ದ. ಆತ ಹಾರ್ಟ್ಅಟ್ಯಾಕ್‌ನಿಂದ ಸತ್ತ ಅಂತ ಆತನ ತಾಯಿಯೇ ಹೇಳಿದ್ಲು. ಆದ್ರೆ ತಂದೆ ಮಾತ್ರ ಇದು ಕೊಲೆನೇ ಅಂತ ಹೇಳಿಬಿಟ್ಟಿದ್ದ. ಸೀದಾ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ಕೂಡ ಕೊಟ್ಟಿದ್ದ. ಇನ್ನೂ ಫೀಲ್ಡ್‌ಗೆ ಇಳಿದ ಪೊಲೀಸರು ಮೊದಲು ಅರೆಸ್ಟ್ ಮಾಡಿದ್ದೇ ತಾಯಿಯನ್ನ. ಹರಿಪ್ರಸಾದನ ಕುತ್ತಿಗೆಯ ಮೇಲಿದ್ದ ಗಾಯದ ಗುರುತು ತಂದೆಗೆ ಅನುಮಾನ ಬರುವಂತೆ ಮಾಡಿತ್ತು.ಆತ ಸೀದಾ ಪೊಲೀಸ್ ಸ್ಟೇಷನ್‌ಗೆ ಹೋಗಿ ನ್ಯಾಯ ಕೊಡಿಸಿ ಅಂತ ಕೇಳಿದ್ದ. ಅಷ್ಟೇ ಅಲ್ಲ ತನ್ನ ಮಗನನ್ನ ಆತನ ತಾಯಿಯೇ ಕೊಂದಿದ್ದಾಳೆ ಅಂತಲೂ ಆರೋಪ ಮಾಡಿದ್ದ. ತಾಯಿಯೇ ಮಗನನ್ನ ಕೊಂದುಬಿಟ್ಟಳಾ ಅಂತ ಅನ್ನಿಸಬಹುದು. ಆದ್ರೆ ತಂದೆಗೆ ಮಾತ್ರ ಹೆಂಡತಿ ಮೇಲೆಯೇ ಅನುಮಾನ ಬಂದಿತ್ತು.

ಇದನ್ನೂ ವೀಕ್ಷಿಸಿ: ಮುಂಗಾರು ವಿಳಂಬ..ಬರಗಾಲದ ಭೀತಿ: ಮಳೆ ಬರಲೆಂದು ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ..!

Video Top Stories