Liquor Scam Case : ಸಂಜಯ್ ಸಿಂಗ್ ರಿಲೀಸ್.. ಕೇಜ್ರಿವಾಲ್ ಲಾಕ್: ಎಲೆಕ್ಷನ್ ಮುಗಿಯೋ ವರೆಗೂ ಸಿಎಂ, ಡಿಸಿಎಂಗೆ ಜೈಲಾ..?

ಏಪ್ರಿಲ್ 15ರವರೆಗೂ ಕೇಜ್ರಿವಾಲ್‌ಗೆ ನ್ಯಾಯಾಂಗ ಬಂಧನ
ಎರಡು ದಿನಗಳಿಂದ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ
ತಿಹಾರ್ ಜೈಲಿನಿಂದಲೇ ದೆಹಲಿ ಸಿಎಂ ಕೇಜ್ರಿವಾಲ್ ದರ್ಬಾರ್

Share this Video
  • FB
  • Linkdin
  • Whatsapp

ಲಿಕ್ಕರ್ ಸ್ಕ್ಯಾಮ್‌ನಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್(Sanjay Singh) ರಿಲೀಸ್ ಆಗಿದ್ದಾರೆ. ಆರು ತಿಂಗಳ ಬಳಿಕ ಸುಪ್ರೀಂಕೋರ್ಟ್‌ನಿಂದ(Supreme Court) ಜಾಮೀನು ಪಡೆದಿದ್ದಾರೆ. ಅ. 4, 2023ರಲ್ಲಿ ಸಂಜಯ್ ಸಿಂಗ್‌ರನ್ನು ಇಡಿ ಬಂಧಿಸಿತ್ತು. ನ್ಯಾ. ಸಂಜೀವ್ ಖನ್ನಾ ನೇತೃತ್ವದ ಪೀಠದಿಂದ ಜಾಮೀನು ದೊರೆತಿದೆ. ಸಂಸದ ಸಂಜಯ್ ಸಿಂಗ್ ರಿಲೀಸ್ ಆದ್ರೆ, ಕೇಜ್ರಿವಾಲ್(Arvind Kejriwal) ಲಾಕ್ ಆಗಿದ್ದಾರೆ. ಸಂಜಯ್ ಸಿಂಗ್ ಜಾಮೀನಿಗೆ ಆಕ್ಷೇಪವನ್ನು ಕೋರ್ಟ್‌ ಎತ್ತಿಲ್ಲ. ಸಿಎಂ ಕೇಜ್ರಿವಾಲ್‌ರನ್ನು ಮಾತ್ರ ಜೈಲಿಗೆ ಕಳುಹಿಸಿದ್ದು ಯಾಕೆ? ಎಲೆಕ್ಷನ್ ಮುಗಿಯೋ ವರೆಗೂ ಸಿಎಂ, ಡಿಸಿಎಂಗೆ ಜೈಲಾ..? ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. ಮಾರ್ಚ್ 21ಕ್ಕೆ ಸಿಎಂ ಕೇಜ್ರಿವಾಲ್‌ರನ್ನು ಇಡಿ ಬಂಧಿಸಿತ್ತು. ಫೆಬ್ರವರಿ 2023ರಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನವಾಗಿತ್ತು.

ಇದನ್ನೂ ವೀಕ್ಷಿಸಿ: Amit Shah: ಬಿಜೆಪಿ ನಾಯಕರಿಗೆ ಟೆನ್ಷನ್ ಹೆಚ್ಚಿಸಿತಾ 4 ಕ್ಷೇತ್ರ ? ಆಯಾ ಕ್ಷೇತ್ರದ ನಾಯಕರಿಗೆ ಗೆಲುವಿನ ಗುರಿ ಕೊಟ್ಟ ಅಮಿತ್ ಶಾ!

Related Video