ರಾಹುಲ್ ಗಾಂಧಿ ಭಾರತ್ ಜೋಡೋ, ದಕ್ಷಿಣದಲ್ಲಿ ಕಾಂಗ್ರೆಸ್ ಸಂಸದನ ಪ್ರತ್ಯೇಕ ರಾಷ್ಟ್ರದ ಕೂಗು!

ಅನುದಾನದಲ್ಲಿ ಕೇಂದ್ರದಿಂದ ಅನ್ಯಾಯ, ದಕ್ಷಿಣ ಭಾರತ ಪ್ರತ್ಯೇಕತೆ ಎಚ್ಚರಿಕೆ ನೀಡಿದ ಸಂಸದ ಸುರೇಶ್, ಜನಪ್ರಿಯ ಘೋಷಣೆ ಇಲ್ಲ, ಒಲೈಕೆ ಇಲ್ಲ, ಚೊಕ್ಕ ಬಜೆಟ್ ಮಂಡಿಸಿದ ಕೇಂದ್ರ, ಹರ ಹರ ಮಹಾದೇವ್ ಘೋಷಣೆಯೊಂದಿಗೆ ಗ್ಯಾನವಾಪಿಯಲ್ಲಿ ಪೂಜೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕೇಂದ್ರ ಬಜೆಟ್ ಮಂಡನೆ ಬಳಿಕ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಆಡಿದ ಮಾತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತದೆ. ಹಿಂದಿ ಪ್ರದೇಶದವರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಭಾರತದ ಪ್ರತ್ಯೇಕ ರಾಷ್ಟ್ರ ಕೂಗು ಮುಂದಿಡಬೇಕಾಗುತ್ತದೆ ಎಂದು ಸುರೇಶ್ ಎಚ್ಚರಿಸಿದ್ದಾರೆ. ಡಿಕೆ ಸಂಸದ ಸುರೇಶ್ ಹೇಳಿಕೆಗೆ ಬಿಜೆಪಿ ಸೇರಿದಂತೆ ಹಲವು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಬಿಜೆಪಿ ಆಗ್ರಹಿಸಿದೆ. ಇದರ ಬೆನ್ನಲ್ಲೇ ಸುರೇಶ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದಾರೆ. ಡಿಕೆ ಸುರೇಶ್ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video