ಡಜನ್‌ಗಟ್ಟಲೆ ಮೊಸಳೆ ಮೊಟ್ಟೆಗಳು! ಗ್ರಾಮಸ್ಥರಲ್ಲಿ ಆತಂಕ

ಮುಜಾಫರ್‌ನಗರ: ಉತ್ತರಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಒಂದು ಮನೆಯಲ್ಲಿ ಮೊಸಳೆಯ 12 ಮೊಟ್ಟೆಗಳು ಪತ್ತೆಯಾಗಿವೆ. ಅದರಲ್ಲಿ ಐದು ಮೊಟ್ಟೆಗಳಿಂದ ಮರಿಗಳು ಹೊರ ಬಂದಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Jul 2, 2022, 5:28 PM IST | Last Updated Jul 2, 2022, 5:28 PM IST

ಮುಜಾಫರ್‌ನಗರ: ಉತ್ತರಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಒಂದು ಮನೆಯಲ್ಲಿ ಮೊಸಳೆಯ 12 ಮೊಟ್ಟೆಗಳು ಪತ್ತೆಯಾಗಿವೆ. ಅದರಲ್ಲಿ ಐದು ಮೊಟ್ಟೆಗಳಿಂದ ಮರಿಗಳು ಹೊರ ಬಂದಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಜಾಫರ್ ನಗರ ಜಿಲ್ಲೆಯ ಪುರ್ಕಾಜಿ ಪಟ್ಟಣದ ಖಾದರ್ ಪ್ರದೇಶದ ಭದೌಲಾ ಗ್ರಾಮದಲ್ಲಿಈ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಗ್ರಾಮದ ಅರುಣ್ ತ್ಯಾಗಿ ಎಂಬುವವರ ಮನೆಯ ಬಳಿ ಸುಮಾರು ಹನ್ನೆರಡು ಮೊಸಳೆ ಮೊಟ್ಟೆಗಳು ಸಿಕ್ಕಿದ್ದರಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿತ್ತು. ಇವುಗಳನ್ನು ಗ್ರಾಮಸ್ಥರು ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ಸುರಕ್ಷಿತವಾಗಿ ಇರಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ, ಈ ಮೊಟ್ಟೆಗಳಿಂದ ಸುಮಾರು 5 ಮೊಸಳೆ ಮರಿಗಳು ಹೊರಬಂದವು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಈ ಮೊಸಳೆಗಳ ಮರಿಗಳನ್ನು ಕರೆದೊಯ್ದಿದ್ದಾರೆ. ಈ ಮೊಸಳೆಗಳು ಪತ್ತೆಯಾದ ಜಾಗವೂ  ನದಿ ಸಮೀಪವಿದ್ದು, ಎರಡು ವರ್ಷಗಳ ಹಿಂದೆಯೂ ಇಲ್ಲಿ ದೈತ್ಯ ಮೊಸಳೆಯೊಂದು ಬಂದಿತ್ತು. ಈ ವೇಳೆ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಎಲ್ಲೋ ದೂರ ಬಿಟ್ಟಿದ್ದರು.