
ಮೋದಿ ಸರ್ಕಾರದಿಂದ ಜಿಎಸ್ಟಿಗೆ ಬಿಗ್ ಸರ್ಜರಿ! ಅರ್ಥಕ್ರಾಂತಿಗೆ ಆಹ್ವಾನ ನೀಡತ್ತಾ ಮೋದಿ ನಿರ್ಧಾರ?
ಜಿಎಸ್‌ಟಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಬಹು-ಸ್ಲ್ಯಾಬ್ ತೆರಿಗೆ ಪದ್ಧತಿಯನ್ನು ಸರಳಗೊಳಿಸಿ ಎರಡು ಹಂತಗಳಲ್ಲಿ ತೆರಿಗೆ ವಿಧಿಸಲು ಶಿಫಾರಸು ಮಾಡಲಾಗಿದೆ. ಈ ಬದಲಾವಣೆಯ ಲಾಭ-ನಷ್ಟಗಳೇನು?
ಬೆಂಗಳೂರು (ಆ.22): ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದೆ.
ದೇಶದಲ್ಲಿ ಚಾಲ್ತಿಯಲ್ಲಿರುವ ಬಹು-ಸ್ಲ್ಯಾಬ್ ತೆರಿಗೆ ಪದ್ಧತಿಯನ್ನು ಸರಳಗೊಳಿಸಿ, ಇನ್ನು ಮುಂದೆ ಕೇವಲ ಎರಡು ಹಂತಗಳಲ್ಲಿ ತೆರಿಗೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಂತ್ರಿಗಳ ಗುಂಪು ಶಿಫಾರಸು ಮಾಡಿದೆ.
ಈ ನಿರ್ಧಾರವು ಗ್ರಾಹಕರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ಇದನ್ನು ಮೋದಿ ಸರ್ಕಾರವು ದೀಪಾವಳಿ ಉಡುಗೊರೆ ಎಂದು ಘೋಷಿಸುವ ಸಾಧ್ಯತೆ ಇದೆ. ಆದರೆ, ಈ ನಿರ್ಣಯದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ, ಮತ್ತು ಆರ್ಥಿಕತೆಯ ಮೇಲೆ ಇದರ ಪರಿಣಾಮವೇನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.