ಮತಯುದ್ಧದ ಹೊತ್ತಲ್ಲಿ ಇದೆಂಥಾ ವಾಗ್ಯುದ್ಧ!? ದೇಶದಲ್ಲಿ ಸದ್ದು ಮಾಡುತ್ತಿದೆ ಟೆರರ್ ಪಾಲಿಟಿಕ್ಸ್!
ದೇಶದಲ್ಲಿ ಚುನಾವಣೆ ನಡಿತಿದೆ.. ಅದೇ ಹೊತ್ತಲ್ಲಿ ಉಗ್ರರ ಆಟಾಟೋಪ, ಆರ್ಭಟ ಕೂಡ ಹೆಚ್ಚಾಗಿದೆ.. ಅವರನ್ನ ಕಟ್ಟಿಹಾಕೋಕೆ ಭಾರತ ಸಿದ್ಧಗೊಳ್ಳಬೇಕು.. ಆದ್ರೆ ಇಲ್ ನೋಡಿದ್ರೆ, ಆ ವಿಚಾರದಲ್ಲೂ ರಾಜಕಾರಣ ಎದ್ದು ಕಾಣ್ತಾ ಇದೆ.. ಇದರ ಹಿಂದಿರೋ ಅಸಲಿ ಕತೆ ಏನು ಅನ್ನೋ ಮಾಹಿತಿ ಇಲ್ಲಿದೆ
ದೇಶದಲ್ಲೀಗ ಚುನಾವಣೆ ಕಾವು ತೀವ್ರವಾಗಿದೆ.. ಅದರ ಮಧ್ಯೆ, ಪಕ್ಷ ಪಕ್ಷಗಳ ಮಧ್ಯೆ ಯುದ್ಧ ಜೋರಾಗಿದೆ.. ಪ್ರತಿಯೊಂದು ಸಂಗತಿಯೂ ರಾಜಕೀಯ ಅಸ್ತ್ರವಾಗಿ, ಪ್ರತ್ಯಸ್ತ್ರವಾಗಿ ಬಳಸೋಕೆ ರಾಜಕಾರಣಿಗಳು ನೋಡ್ತಾ ಇದಾರೆ.. ಹೀಗಿರುವಾಗ್ಲೆನೇ, ಅದೊಂದು ದುರಂತವನ್ನೂ ಕೂಡ ರಾಜಕೀಯದ ಕನ್ನಡಕ ಹಾಕ್ಕೊಂಡೇ ನೋಡೋ ಘಟನೆ ನಡೆದಿದೆ.. ಪೂಂಚ್‌ನಲ್ಲಿ ನಮ್ಮ ಸೈನಿಕರ ಮೇಲೆ ನಡೆದಿರೋ ದಾಳಿ, ಬಿಜೆಪಿ ತನ್ನ ಲಾಭಕ್ಕೋಸ್ಕರ ನಡೆಸಿರೋ ಸ್ಟಂಟ್ ಅಂತ ಹೇಳ್ತಾ ಇದ್ದಾರೆ ಎದುರಾಳಿ ಪಾಳಯದ ನಾಯಕರು. ಪುಲ್ವಾಮಾ ದಾಳಿ ನಡೆದಾಗ ಚುನಾವಣೆಗಿನ್ನೂ ತಿಂಗಳುಗಟ್ಟಲೆ ಸಮಯ ಇತ್ತು.. ಆದರೆ ಪೂಂಚ್ ದಾಳಿ ನಡೆದಿರೋದೇ ಚುನಾವಣೆ ನಡಿತಿರೋ ಈ ಸಂದರ್ಭದಲ್ಲಿ.. ಹಾಗಾದ್ರೆ, ಇದರ ಪರಿಣಾಮ ಚುನಾವಣೆ ಮೇಲೆ ಹೇಗಿರಲಿದೆ..? ಅಸಲಿಗೆ ರಾಷ್ಟ್ರದ ರಕ್ಷಣೆ ವಿಚಾರ, ಚುನಾವಣಾ ವಿಷಯವಾಗ್ತಾ ಇರೋದು ಯಾಕೆ? ಇದೆಲ್ಲದರ ಪೂರ್ತಿ ಮಾಹಿತಿ ನಿಮಗೆ ನೀಡೋದೇ ಇವತ್ತಿನ ಸುವರ್ಣ ಫೋಕಸ್, ಟೆರರ್ ಪಾಲಿಟಿಕ್ಸ್