RIP Lata Mangeshkar: ಎಲ್ಲ ಬಗೆಯ ಹಾಡುಗಳನ್ನು ನೀಡಿದ್ದ ಲತಾ... ರಾಜ್ಯದಲ್ಲಿ 2 ದಿನ ಶೋಕಾಚರಣೆ
* ಗಾನಕೋಗಿಲೆ ಲತಾ ಮಂಗೇಶ್ಕರ್ ವಿಧಿವಶ
* ಎಲ್ಲ ಬಗೆಯ ಗೀತೆಗಳ ಮೇಲೆ ಹಿಡಿತ
* ದಿವ್ಯ ಚೇತನಕ್ಕೆ ಸಂಗೀತ ನಮನ
* ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ
ನವದೆಹಲಿ (ಫೆ. 6): ಸಂಗೀತ ಲೋಕದ ತಾರೆ, ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಭಾನುವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಅಂತ್ಯಕ್ರಿಯೆ ಮುಂಬೈನ (Mumbai) ಶಿವಾಜಿ ಪಾರ್ಕ್ ನಲ್ಲಿ (Shivaji Park) ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದ್ದು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡದ ಗಾಯಕಿಯರು ಲತಾ ಅವರಿಗೆ ಸಂಗೀತ ನಮನ ಸಲ್ಲಿಸಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ಲತಾ ಅವರ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳುವ ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ. ಲತಾ ಸಹೋದರಿ ಉಷಾ ಮಂಗೇಶ್ಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಂತಾಪ ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ 2 ದಿನಗಳ ಕಾಲ ಶೋಕಾಚರಣೆ ನಿರ್ಧಾರ ಮಾಡಲಾಗಿದ್ದು ಯಾವುದೇ ಸಾರ್ವಜನಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದಿಲ್ಲ.