ರಥಯಾತ್ರೆ ಸಾರಥಿಯ ಧರ್ಮಜಾಗೃತಿ ಹೋರಾಟ..! ರಾಮನಿಗಾಗಿ ಅಡ್ವಾಣಿ ಎದುರಿಸಿದ ವಿಚಾರಣೆಗಳೆಷ್ಟು..?

ರಾಮ ಮಂದಿರ ಹೋರಾಟದ ರೂವಾರಿ ಎಲ್ ಕೆ ಅಡ್ವಾಣಿ..!
ಮಂದಿರ ಹೋರಾಟದಲ್ಲಿ ಅಡ್ವಾಣಿ ಹೆಸರು ಅಜರಾಮರ..!
‘ಮಂದಿರ್ ವಹೀ ಬನಾಯೆಂಗೇ..ಕೌನ್ ರೋಖೇಗಾ..? ’

First Published Feb 4, 2024, 10:07 AM IST | Last Updated Feb 4, 2024, 10:08 AM IST

ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿರುವ ಲಾಲ್ ಕೃಷ್ಣ ಅಡ್ವಾಣಿಯವರಿಗೆ(LK Advani) ಭಾರತ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಮ ಮಂದಿರ(Ram Mandir) ಉದ್ಘಾಟನೆ ಬೆನ್ನಲ್ಲೇ ಭಾರತದ ಅತ್ಯುನ್ನತ ನಾಗರಿಕ ಗೌರವ(Bharat Ratna) ಸಿಕ್ಕಿರೋದು ರಾಮಭಕ್ತ ಅಡ್ವಾಣಿಯವರ ಕೀರ್ತಿ ಹೆಚ್ಚಿಸಿದೆ. ಸ್ವತಂತ್ರ್ಯ ಪೂರ್ವ ಭಾರತದ ಸಿಂಧ್ ಪ್ರಾಂತ್ಯದ ಗೊರೆಗಾಂವ್‌ನಲ್ಲಿ ಅಂದರೆ ಈಗಿನ ಪಾಕಿಸ್ತಾನದ ಕರಾಚಿಯಲ್ಲಿ ನವೆಂಬರ್ 8, 1927ರಲ್ಲಿ ಜನಿಸಿದ ಅಡ್ವಾಣಿ, ಬಳಿಕ 1941 ತನ್ನ 14ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್‌ಗೆ(RSS) ಸೇರ್ಪಡೆಗೊಂಡರು. 1947ರಲ್ಲಿ ಕರಾಚಿ ಯುನಿಟ್‌ಗೆ ಕಾರ್ಯದರ್ಶಿಯಾದರು. ಜನಸಂಘದ ಮೂಲಕ ರಾಜಕೀಯ ಜೀವನವನ್ನು ಆರಂಭಿಸಿದ ಲಾಲ್ ಕೃಷ್ಣ ಅಡ್ವಾಣಿ. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೂಡಿ ಬಿಜೆಪಿಯನ್ನು(BJP) ಕಟ್ಟಲು ದಶಕಗಳ ಕಾಲ ಹಗಲಿರುಳು ದೇಶಾದ್ಯಂತ ಸುತ್ತಾಡಿದ್ದಾರೆ. ಬಿಜೆಪಿಯಲ್ಲಿ ಏನೂ ಇಲ್ಲದಿದ್ದಾಗ ಪಕ್ಷವನ್ನು ಕಟ್ಟುವುದರ ಜತೆಗೆ ಪ್ರತಿ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರಗಳು ಬರುವ ನಿಟ್ಟಿನಲ್ಲಿ ಕೆಲಸವನ್ನು ಆರಂಭಿಸಿದ್ದು  ಇದೇ ಅಡ್ವಾಣಿ. ರಾಮಮಂದಿರ ನಿರ್ಮಾಣಕ್ಕೆ ರಥಯಾತ್ರೆ, ರಾಮಮಂದಿರ ನಿರ್ಮಾಣ ಹೋರಾಟ ಸೇರಿದಂತೆ ಇನ್ನಿತರೆ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.

ಇದನ್ನೂ ವೀಕ್ಷಿಸಿ:  LK Advani: ಬಿಜೆಪಿ ಭೀಷ್ಮ..ಅಡ್ವಾಣಿಗೆ ಭಾರತ ರತ್ನ: ರಾಜಕೀಯ ಗುರುವಿಗೆ ಶಿಷ್ಯ ಕೊಟ್ಟ ಅದ್ಭುತ ಕಾಣಿಕೆ..!