LK Advani: ಬಿಜೆಪಿ ಭೀಷ್ಮ..ಅಡ್ವಾಣಿಗೆ ಭಾರತ ರತ್ನ: ರಾಜಕೀಯ ಗುರುವಿಗೆ ಶಿಷ್ಯ ಕೊಟ್ಟ ಅದ್ಭುತ ಕಾಣಿಕೆ..!

ಗುರುವನ್ನು ವಿಶೇಷ ರೀತಿಯಲ್ಲಿ ಹೊಗಳಿದ ಪ್ರಧಾನಿ 
ರಾಮಮಂದಿರ ಲೋಕಾರ್ಪಣೆ ಬೆನ್ನಲ್ಲೇ ‘ಭಾರತ ರತ್ನ’
ರಾಮಮಂದಿರ ಹೋರಾಟದ ರೂವಾರಿಯಾಗಿದ್ದ ಅಡ್ವಾಣಿ 

First Published Feb 4, 2024, 9:41 AM IST | Last Updated Feb 4, 2024, 9:42 AM IST

ಬಿಜೆಪಿಯ ಭೀಷ್ಮ, ಹಿರಿಯ ರಾಜಕಾರಣಿ ಲಾಲ್ ಕೃಷ್ಣ ಅಡ್ವಾಣಿ(LK Advani) ಅವ್ರಿಗೆ ಭಾರತದಲ್ಲಿ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು(Bharat Ratna) ಕೇಂದ್ರ ಸರ್ಕಾರ ಘೋಷಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. 96 ವರ್ಷದ ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾಣಿ ಅವರಿಗೆ ಲಭಿಸಿದ ಈ ಅತ್ಯುನ್ನತ ಗೌರವಕ್ಕಾಗಿ ಇಡೀ ಭಾರತ ದೇಶವೇ ಅಭಿನಂದಿಸಿದೆ.ರಾಮ ಮಂದಿ(Ram Mandir) ನಿರ್ಮಾಣಕ್ಕೆ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಧೀಮಂತ. ಬಿಜೆಪಿ ಪಕ್ಷದ ಹಿರಿಯ ನಾಯಕ. ದೇಶದಲ್ಲಿ ಪಕ್ಷ ಅಷ್ಟೊಂದು ಚಾಲ್ತಿಯಲ್ಲಿ ಇಲ್ಲದೇ ಇದ್ದಾಗ, ಅಟಲ್ ಬಿಹಾರಿ ವಾಜಪೇಯಿ ಅವರೊಟ್ಟಿಗೆ ಜೋಡೆತ್ತಿನಂತೆ ನಿಂತು. ದೇಶಾದ್ಯಂತ ಸುತ್ತಿ ಪಕ್ಷ ಕಟ್ಟಿದ್ದ ಎದೆಗಾರ ಶ್ರೀ ಲಾಲ ಕೃಷ್ಣ ಅಡ್ವಾಣಿ ಈಗ ಭಾರತಕ್ಕೆ ರತ್ನವಾಗಿದ್ದಾರೆ. 

ಸಾರ್ವಜನಿಕ ಜೀವನದಲ್ಲಿ ಅಡ್ವಾಣಿ ಅವರು ಸೇವೆ ಅಪಾರವಾದದ್ದು. ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿ, ಅಚಲವಾದ ಬದ್ಧತೆ ಉಳ್ಳವರಾಗಿ ಗುರುತಿಸಿಕೊಂಡವರು ಅಡ್ವಾಣಿಯವರು. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಕುರಿತು ಎಲ್ ಕೆ ಅಡ್ವಾಣಿ ಅವರ ಕೊಡುಗೆ ಅಪಾರ. ಒಟ್ಟಾರೆ, ದೇಶದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಹೆಜ್ಜೆ ಗುರುತು ಹೊಂದಿರುವ ಎಲ್ ಕೆ ಅಡ್ವಾನಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಣೆ ಮಾಡಿದೆ. ಅಡ್ವಾಣಿಯವರಿಗೆ ಸಂದ ಈ ಗೌರವವನ್ನು ದೇಶವೇ ಒಪ್ಪಿಕೊಂಡಿದೆ ಮತ್ತು ಮೆಚ್ಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಗುರುವಿಗೆ ಸಂದ ಈ ಗೌರವವನ್ನು ಅತ್ಯಂತ ಸಂತಸದಿಂದ ಹಂಚಿಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  Mandya Politics: ಸ್ವಾಮಿ Vs ಸ್ವಾಮಿ.. ಮತ್ತೊಂದು ರಣರಂಗಕ್ಕೆ ಸಾಕ್ಷಿಯಾಗುತ್ತಾ ಮಂಡ್ಯ..?

Video Top Stories