Asianet Suvarna News Asianet Suvarna News

ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್: ಬಿಜೆಪಿಯತ್ತ ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ?

ನಾಳೆ ಬಿಜೆಪಿ 2 ಪ್ರಮುಖ ನಿರ್ಣಯ ಕೈಗೊಳ್ಳುವ ಸಾಧ್ಯತೆ..!
ಪ್ರತಿ ರಾಜ್ಯಗಳ ನಾಯಕರೊಂದಿಗೆ ಕುಲಂಕುಶವಾಗಿ ಚರ್ಚೆ!
ಮೈತ್ರಿ ಪಕ್ಷಗಳೊಂದಿಗೆ ಆಗುವ ನಷ್ಟ- ಲಾಭದ ಮಾತುಕತೆ!

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ(Loksabha) 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂದು ಅಬ್ ಕಿ ಬಾರ್.. ಚಾರ್ ಸೌ ಫಾರ್ ಎಂದು ಘೋಷಣೆ ಮೊಳಗಿಸುತ್ತಿದೆ. ಅದರ ಭಾಗವಾಗಿ ದೆಹಲಿಯ(Delhi) ಭಾರತ್ ಮಂಟಪಂನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ(BJP National Executive meeting) ಹಮ್ಮಿಕೊಂಡಿದೆ. ಬರೋಬ್ಬರಿ 11 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದು, ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲೂ ರಣತಂತ್ರ ಹೆಣೆಯುತ್ತಿದೆ. ಅಲ್ಲದೇ ಶನಿವಾರ ಮಂಗಳೂರಿನಲ್ಲಿ(Mangalore) ಲೋಕಸಭಾ ಸಮರಕ್ಕೆ ಕಾಂಗ್ರೆಸ್‌(Congress) ಕಹಳೆ ಮೊಳಗಿಸಿದ್ರೆ. ಅತ್ತ ಮಧ್ಯ ಪ್ರದೇಶದಲ್ಲಿ ಕಮಲನಾಥ್ ಬಿಜೆಪಿ ಸೇರ್ತಾರೆ ಸುದ್ದಿ ಸಂಚಲನ ಮೂಡಿಸಿದೆ. ಒಂದೆಡೆ ಇಂಡಿಯಾ ಮೈತ್ರಿಕೂಟದ ನಾಯಕರು. ಇನ್ನೊಂದೆಡೆ ಸ್ವಪಕ್ಷೀಯರ ಪಕ್ಷಾಂತರದಿಂದ ಕಾಂಗ್ರೆಸ್ ಕಂಗಾಲಾಗ್ತಿದೆ. 

ಇದನ್ನೂ ವೀಕ್ಷಿಸಿ: Mani Shankar Aiyar on Pakistan: ಪಾಕಿಸ್ತಾನವನ್ನು ಹೊಗಳಿ.. ಮೋದಿಯನ್ನು ತೆಗಳಿದ ವಿವಾದ ಪುರುಷ..!

Video Top Stories