Mani Shankar Aiyar on Pakistan: ಪಾಕಿಸ್ತಾನವನ್ನು ಹೊಗಳಿ.. ಮೋದಿಯನ್ನು ತೆಗಳಿದ ವಿವಾದ ಪುರುಷ..!

ಮತ್ತೆ ಅಣಿಮುತ್ತು ಉದುರಿಸಿ ವಿವಾದ ಎಬ್ಬಿಸಿದ ಮಣಿಶಂಕರ್ ಅಯ್ಯರ್..!
"ಪಾಕ್ ಜೊತೆ ಮೋದಿ ಮಾತಾಡಿದ್ರೆ ಎಲ್ಲಾ ಸಮಸ್ಯೆ ಬಗೆಹರಿಯಲಿದ್ಯಂತೆ.."
"ಮೋದಿಗೆ ಪಾಕ್ ಜೊತೆ ಮಾತನಾಡಲು ಧೈರ್ಯವಿಲ್ವಾ.." ಅಯ್ಯರ್ ಪ್ರಶ್ನೆ!
ಅಂದು ಮೋದಿಯನ್ನು ಸೋಲಿಸಲು ಪಾಕ್ ನೆರವು ಕೋರಿದ್ದ ವಿವಾದವೀರ..!

Share this Video
  • FB
  • Linkdin
  • Whatsapp

82 ವರ್ಷದ ಈ ಹರಕು ಬಾಯಿಯ ಕಾಂಗ್ರೆಸ್ ನಾಯಕ ಬಾಯಿ ಬಿಟ್ರೆ ಬರೀ ವಿವಾದ. ಈ ವ್ಯಕ್ತಿ ಪಾಕಿಸ್ತಾನಕ್ಕೆ(Pakistan) ಹೋಗ್ತಾರೆ, ಪಾಕ್ ನೆಲದಲ್ಲಿ ನಿಂತು ಭಾರತವನ್ನು ಟೀಕಿಸ್ತಾರೆ, ಶತ್ರು ರಾಷ್ಟ್ರದಲ್ಲಿ ನಿಂತು ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧ ವಿಷ ಉಗುಳ್ತಾರೆ. ಕಳೆದ ಹಲವಾರು ವರ್ಷಗಳಿಂದ ಇದನ್ನೇ ಮಾಡ್ತಾ ಬಂದಿದ್ದ ಮಣಿಶಂಕರ್ ಅಯ್ಯರ್, ಈಗ ಮತ್ತೆ ಪಾಕಿಸ್ತಾನವನ್ನು ಹೊಗಳಿ, ಪ್ರಧಾನಿ ಮೋದಿಯವರನ್ನು ತೆಗಳಿ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. ಮಣಿಶಂಕರ್ ಅಯ್ಯರ್(Congress Leader Mani Shankar Aiyar ) ಯಾರು ಅಂದ್ರೆ ಅಷ್ಟು ಬೇಗ ಯಾರಿಗೂ ಗೊತ್ತಾಗಲ್ಲ. ಆದ್ರೆ ಚಾಯ್ ವಾಲಾ ಅನ್ನೋ ಶಬ್ದ ಕಿವಿಗೆ ಬಿದ್ರೆ ಸಾಕು, ಆ ಮಣಿಶಂಕರ್ ಅಯ್ಯರ್ ಯಾರು ಅನ್ನೋದು ಗೊತ್ತಾಗ್ಲೇಬೇಕು. ಯೆಸ್, ಮೋದಿಯವರಿಗೆ ಚಾಯ್ ವಾಲಾ ಅನ್ನೋ ಹಣೆಪಟ್ಟಿ ಕಟ್ಟಿದ್ದ ಭೂಪ ಇವ್ರೇ. ಆ ಹಣೆಪಟ್ಟಿಯಿಂದ ಮುಂದೆ ಏನೇನೆಲ್ಲಾ ಆಯ್ತು ಅನ್ನೋದನ್ನ ಇಡೀ ಜಗತ್ತೇ ಮೋಡಿ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಇತ್ತೀಚೆಗೆ ಪಾಕಿಸ್ತಾನದ ಲಾಹೋರ್'ಗೆ ಭೇಟಿ ಕೊಟ್ಟಿದ್ರು. ಲಾಹೋರ್‌ನ ಅಲ್ಹಮರಾದಲ್ಲಿ ಫೈಜ್ ಫೆಸ್ಟಿವಲ್‌ ಕಾರ್ಯಕ್ರಮಕ್ಕೆ ಮಣಿಶಂಕರ್ ಅಯ್ಯರ್ ಅವರನ್ನು ಆಹ್ವಾನಿಸಲಾಗಿತ್ತು. ಫೈಜ್ ಫೆಸ್ಟಿವಲ್‌'ನ ಎರಡನೇ ದಿನ ಆಯೋಜಿಸಲಾಗಿದ್ದ 'ಹರ್ ಜಿ ರಖ್, ವಿಸಾಲ್ ಕೇ ಪೂಲ್, ಇಂಡೋ- ಪಾಕ್ ವ್ಯವಹಾರ' ಎಂಬ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ವೀಕ್ಷಿಸಿ: Jaanu from Sweden: ‘ಎಲ್ಲಿ ನನ್ನವರು..? ದಯವಿಟ್ಟು ಹುಡುಕಿಕೊಡಿ’: ಇದು ರೋಚಕ..ಅಷ್ಟೇ ಭಾವುಕ ಕಥೆ..!

Related Video