Ratna Bhandar Key Lost: ಜಗನ್ನಾಥನ ಖಜಾನೆಯಲ್ಲಿ 150 ಕೆ.ಜಿ ಚಿನ್ನ ಬೆಳ್ಳಿ ವಜ್ರ.. ಏನಿದು ರತ್ನ ಭಂಡಾರ..?

ಪುರಿ ಜಗನ್ನಾಥನ ’ರತ್ನ ಭಂಡಾರ'ದ ಮೂಲ ಕೀಲಿ ಕೈ ನಾಪತ್ತೆ..!
ರತ್ನ ಭಂಡಾರದ ಮೂಲ ಕೀಲಿ ಕೈ ನಾಪತ್ತೆ ಹಿಂದೆ ಯಾರ ಕೈವಾಡ..?
ಒಡಿಶಾ ಚುನಾವಣಾ ದಿಕ್ಕನ್ನೇ ಬದಲಿಸುತ್ತಾ ರತ್ನ ಭಂಡಾರ ರಹಸ್ಯ..?

Share this Video
  • FB
  • Linkdin
  • Whatsapp

ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯ(Jagannath Mandir). ಹಿಂದೂಗಳ ಪವಿತ್ರ ಕ್ಷೇತ್ರ. ಆ ದೇವಸ್ಥಾನದಲ್ಲೊಂದು ರಹಸ್ಯ ರತ್ನ ಭಂಡಾರ(Ratna Bhandar). ಅಲ್ಲಿ ಮೌಲ್ಯದ ಚಿನ್ನ-ಬೆಳ್ಳಿ-ವಜ್ರ-ವೈಢೂರ್ಯ ಸಹಿತ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು. ಆದ್ರೆ ವಿಷ್ಯ ಏನಂದ್ರೆ ರತ್ನ ಭಂಡಾರದ ಒರಿಜಿನಲ್ ಕೀಲಿ ಕೈ ನಾಪತ್ತೆ. ಇದೇ ವಿಚಾರ ಒಡಿಶಾ(Odisha) ಚುನಾವಣಾ ರಣರಂಗದಲ್ಲಿ ಪ್ರತಿಧ್ವನಿಸ್ತಾ ಇದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವ್ರೇ(Narendra Modi) ರತ್ನ ಭಂಡಾರದ ಕೀಲಿ ಕೈ ನಾಪತ್ತೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರತ್ನ ಭಂಡಾರ.. ಆ ಖಜಾನೆಯೊಳಗಿದೆ ಒಂದೂಕಾಲು ಲಕ್ಷಕ್ಕೂ ಹೆಚ್ಚು ತೊಲ ಚಿನ್ನ. ಚಿನ್ನಾಭರಣ, ಚಿನ್ನವನ್ನೊಳಗೊಂಡ ಕಲ್ಲುಗಳು ಒಂದೂವರೆ ಲಕ್ಷ ಗ್ರಾಂ. ಬೆಳ್ಳಿ 258 ಕೆಜಿ. ಇದು ಒಡಿಶಾದ ಕರಾವಳಿಯಲ್ಲಿ ನೆಲೆ ನಿಂತಿರೋ ಪುರಿ ಜಗನ್ನಾಥನ ಆಸ್ತಿ. ಈ ದೇವಸ್ಥಾನಕ್ಕೆ ಬರೋಬ್ಬರಿ 800 ವರ್ಷಗಳ ಇತಿಹಾಸವಿದೆ. ಪುರಿ ದೇಗುಲದ ಒಟ್ಟು ಸಂಪತ್ತಿನ ಮೌಲ್ಯ 150 ಕೋಟಿ ರೂಪಾಯಿಗೂ ಹೆಚ್ಚು. ಜಗನ್ನಾಥ ದೇವಾಲಯದ ಒಳಕೋಣೆಯಲ್ಲೊಂದು ರತ್ನಭಂಡಾರವಿದೆ. ಇದು ಬೆಲೆಯನ್ನೇ ಕಟ್ಟಲಾಗದ ವಸ್ತುಗಳಿಂದ ತುಂಬಿರುವ ರತ್ನ ಭಂಡಾರ. ಅದೇ ರತ್ನ ಭಂಡಾರದ ಮೂಲ ಕೀಲಿ ಕೈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಇದನ್ನೂ ವೀಕ್ಷಿಸಿ: ಬೀಳುವ ಸ್ಥಿತಿಯಲ್ಲಿ ಡೆಡ್ಲಿ ವಿದ್ಯುತ್ ಕಂಬಗಳು: ದುರಂತ ಆಗೋವರೆಗೂ ಎಚ್ಚೆತ್ತುಕೊಳ್ಳಲ್ವಾ ಬೆಸ್ಕಾಂ..?

Related Video