ದೆಹಲಿ ದಂಗೆ: ಅರೆಸೇನಾ ಪಡೆಗಳ ನಿಯೋಜನೆ, ಇಂಟರ್‌ನೆಟ್ ಸೇವೆ ಸ್ಥಗಿತ
ದೆಹಲಿ ಪ್ರತಿಭಟನೆ ಹಿಂಸಾಚಾರ ರೂಪ ಪಡೆಯುತ್ತದ್ದಂತೆ ಸಿಂಘು ಗಡಿ, ಗಾಜೀಪುರ ಗಡಿ, ಟಿಕ್ರಿಗಡಿ, ಮುಕ್ರಬಾಚೌಕ್, ಹಾಗೂ ನಂಗೋಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತಡರಾತ್ರಿ 12 ಗಂಟೆಯವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
ನವದೆಹಲಿ (ಜ. 27): ರೈತರ ಗಣತಂತ್ರ ಟ್ರಾಕ್ಟರ್ ಪರೇಡ್ ಹಿಂಸಾಚಾರದಿಂದ ರಾಷ್ಟ್ರ ರಾಜಧಾನಿ ಮಂಗಳವಾರ ಅಕ್ಷರಶಃ ತತ್ತರಿಸಿ ಹೀಗಿದೆ. ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ, ಹೆಚ್ಚುವರಿ ಅರೆಸೇನಾಪಡೆಗಳನ್ನು ನಿಯೋಜಿಸಿ ಶಾಂತಿ ಕಾಪಾಡಲು ಸೂಚನೆ ನೀಡಿದ್ದಾರೆ.
ದೆಹಲಿ ದಂಗೆ ಪುನಾರಾವರ್ತನೆ ತಡೆಯಲು ಇಂದು ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆಗಳು ಬಂದ್
ಇನ್ನು ಪ್ರತಿಭಟನೆ ಹಿಂಸಾಚಾರ ರೂಪ ಪಡೆಯುತ್ತದ್ದಂತೆ ಸಿಂಘು ಗಡಿ, ಗಾಜೀಪುರ ಗಡಿ, ಟಿಕ್ರಿಗಡಿ, ಮುಕ್ರಬಾಚೌಕ್, ಹಾಗೂ ನಂಗೋಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತಡರಾತ್ರಿ 12 ಗಂಟೆಯವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.