News Hour: ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದ.. ಯಾರಿಗೆ ಲಾಭ?

ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಡುವಿನ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (FTA) ಅಂತಿಮಗೊಂಡಿದ್ದು, ಭಾರತದಿಂದ ರಫ್ತಾಗುವ ಶೇ. 99ರಷ್ಟು ಉತ್ಪನ್ನಗಳ ಮೇಲಿನ ಸುಂಕ ಸಂಪೂರ್ಣ ರದ್ದಾಗಿದೆ. 

Share this Video
  • FB
  • Linkdin
  • Whatsapp

ನವದೆಹಲಿ (ಅ.10): ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ನಡುವಿನ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ (FTA) ಅಂತಿಮಗೊಂಡಿದ್ದು, ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಗೆ ಹೊಸ ದಾರಿ ತೆರೆದಿದೆ. ಈ ಒಪ್ಪಂದದಿಂದಾಗಿ ಭಾರತವು ಬ್ರಿಟನ್‌ಗೆ ರಫ್ತು ಮಾಡುವ ಶೇ. 99 ರಷ್ಟು ಉತ್ಪನ್ನಗಳ ಮೇಲೆ ಸುಂಕ ಸಂಪೂರ್ಣ ರದ್ದಾಗಿದೆ, ಆದರೆ ಬ್ರಿಟನ್‌ನಿಂದ ಭಾರತಕ್ಕೆ ಬರುವ ವಸ್ತುಗಳ ಮೇಲೆ ಶೇ. 3 ರಷ್ಟು ಸುಂಕ ಇರಲಿದೆ. ಇದು ಭಾರತೀಯ ಉದ್ಯಮಕ್ಕೆ ಭಾರಿ ಬೂಸ್ಟ್ ನೀಡಲಿದೆ.

ಭಾರತಕ್ಕೆ ದೊರೆಯುವ ಪ್ರಮುಖ ಪ್ರಯೋಜನಗಳು: ಈ ಒಪ್ಪಂದದಿಂದಾಗಿ ಭಾರತದ ನಿರ್ದಿಷ್ಟ ಕೈಗಾರಿಕೆಗಳಿಗೆ ನೇರ ಲಾಭವಾಗಲಿದ್ದು, ಯುಕೆ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯಲಿವೆ.

ಸುಂಕ ರದ್ದುಗೊಂಡ ಪ್ರಮುಖ ಉತ್ಪನ್ನಗಳು: FTA ಅಡಿಯಲ್ಲಿ, ಯುಕೆಗೆ ರಫ್ತಾಗುವ ಕೆಳಗಿನ ಪ್ರಮುಖ ವರ್ಗಗಳ ವಸ್ತುಗಳ ಮೇಲೆ ಇದ್ದ ಭಾರೀ ಸುಂಕವು ಸಂಪೂರ್ಣವಾಗಿ ರದ್ದಾಗಿದೆ: ಪ್ರಾಣಿ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು, ಹಣ್ಣುಗಳು ಮತ್ತು ತರಕಾರಿಗಳು ಮೇಲಿನ ಹಿಂದಿನ ಸುಂಕವು 20% ರಷ್ಟಿತ್ತು. ಅದೀಗ 0%ಕ್ಕೆ ಇಳಿಕೆಯಾಗಿದೆ. ಟೀ, ಕಾಫಿ ಮತ್ತು ಮಸಾಲೆ ಪದಾರ್ಥಗಳ ಮೇಲೆ ಹಿಂದೆ 8% ರಿಂದ 10% ಸುಂಕವಿತ್ತು. ಅದೂ ಕೂಡ ಶೂನ್ಯಕ್ಕೆ ಇಳಿಕೆಯಾಗಿದೆ.

Related Video