ಬಡಿಗೆಯಲ್ಲೇ ಚೀನಿ ಸೈನಿಕರನ್ನು ಹೊಡೆದೋಡಿಸಿದ ಭಾರತೀಯ ಯೋಧರು!
ಗಡಿಯಲ್ಲಿ ಮತ್ತೊಮ್ಮೆ ಕ್ಯಾತೆ ತೆಗೆದಿದ್ದ ಚೀನಿ ಸೈನಿಕರನ್ನು ಬಡಿಗೆಯಲ್ಲೇ ಹೊಡೆದೋಡಿಸಿದ್ದಾರೆ ಭಾರತೀಯ ಸೈನಿಕರು. ಆ ದೃಶ್ಯ ಈಗ ಲಭ್ಯವಾಗಿದೆ
ಬೆಂಗಳೂರು (ಡಿ. 14): ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚಕಮಕಿ ನಡೆದಿದೆ. ಗಲ್ವಾನ್ ಬಳಿಕ ಭಾರತ ಹಾಗೂ ಚೀನಾ ಸೈನಿಕರನ್ನು ಒಳಗೊಂಡಂತೆ ನಡೆದ ದೊಡ್ಡ ಕಲಹ ಇದಾಗಿದೆ ಎಂದು ಹೇಳಲಾಗಿದೆ.
ಅರುಣಾಚಲ ಪ್ರದೇಶದ ಯಾಂಗ್‌ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!
ಇದರ ನಡುವೆ ಅರುಣಾಚಲ ಪ್ರದೇಶದ ತವಾಂಗ್‌ನದ್ದು ಎಂದು ಹೇಳಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಚೀನಾ ಸೈನಿಕರನ್ನು ಭಾರತದ ಸೈನಿಕರು ಬಡಿಗೆಯಲ್ಲಿ ಬರಿಯುತ್ತಿರುವ ದೃಶ್ಯ ಇದಾಗಿದೆ. ಇದು ತವಾಂಗ್ ಗಡಿ ಪ್ರದೇಶದ ವಿಡಿಯೋ ಆಗಿರುವ ಸಾಧ್ಯತೆ ಇದೆ. ಆದರೆ, ಗಡಿಯನ್ನು ನುಗ್ಗಲು ಯತ್ನ ಮಾಡಿದ ಚೀನಾ ಸೈನಿಕರನ್ನು ಭಾರತದ ಸೈನಿಕರು ಹೊಡೆದೋಡಿಸುತ್ತಿರುವ ದೃಶ್ಯ ಇದಾಗಿದೆ.