ಅರುಣಾಚಲ ಪ್ರದೇಶದ ಯಾಂಗ್‌ಟ್ಸೆ ಪ್ರದೇಶದ ಮೇಲೆ ಚೀನಾ ಕಣ್ಣು ಹಾಕಿರುವುದಕ್ಕೆ ಇದೇ ಕಾರಣ..!

ಈ ಪ್ರದೇಶವು ಹುಲ್ಲುಗಾವಲು ಪ್ರದೇಶ ಮಾತ್ರವಲ್ಲದೆ, ಚೀನಾದ ಕಡೆಯ ಗಡಿಯಿಂದ ಟಿಬೆಟಿಯನ್ನರು ಪೂಜಿಸುವ ಪವಿತ್ರ ಜಲಪಾತಕ್ಕೆ ಹೊಂದಿಕೊಂಡಿದೆ.

why china wants control of yangtse area explained here ash

ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ ಸೆಕ್ಟರ್‌ನಲ್ಲಿರುವ (Tawang Sector) ಯಾಂಗ್‌ಟ್ಸೆ (Yangtse) ಪ್ರದೇಶದಲ್ಲಿ ಡಿಸೆಂಬರ್ 9 ರಂದು ಭಾರತ (India) ಮತ್ತು ಚೀನಾ (China) ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ. ಆದರೆ, ಈ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರು (Soldiers) ಘರ್ಷಣೆ ನಡೆಸುತ್ತಿರುವುದು ಇದೇ ಮೊದಲಲ್ಲ. ಅಕ್ಟೋಬರ್ 2021 ರಲ್ಲಿ ಈ ಪ್ರದೇಶದಲ್ಲಿ ಸಣ್ಣ ಪುಟ್ಟ ಚಕಮಕಿಗಳು ನಡೆದಿವೆ. ವಾಸ್ತವವಾಗಿ, ಎರಡು ಸಶಸ್ತ್ರ ಪಡೆಗಳ ನಡುವಿನ ಘರ್ಷಣೆಗಳು ಸಾಮಾನ್ಯ ಎಂದೂ ತಿಳಿದುಬಂದಿದೆ. 

ಹಾಗಾದರೆ ಯಾಂಗ್‌ಟ್ಸೆ ಪ್ರದೇಶ ಯಾಕೆ ಪ್ರಮುಖವಾಗಿದೆ..? ನೈಜ ನಿಯಂತ್ರಣ ರೇಖೆಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಮೂಲಕ ಚೀನಾ ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಲು ಯಾಕೆ ಬಯಸುತ್ತದೆ ಅಂತೀರಾ..? "ಯಾಂಗ್‌ಟ್ಸೆ ಪ್ರದೇಶವನ್ನು ಚೀನಾ ಸ್ವಲ್ಪ ಸಮಯದಿಂದ ತನ್ನದೆಂದು ಹೇಳಿಕೊಳ್ಳುತ್ತಿದೆ. 1986-87ರಲ್ಲಿ ವಾಂಗ್‌ಡಂಗ್‌ ಪ್ರದೇಶದಲ್ಲಿ ಚೀನಾ ಸೇನೆ ಒಳನುಗ್ಗಿ ಆಕ್ರಮಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದವು’’ ಎಂದು ತವಾಂಗ್ ಸೆಕ್ಟರ್‌ನಲ್ಲಿ ಬ್ರಿಗೇಡ್‌ ಕಮಾಂಡರ್ ಆಗಿದ್ದ ಮತ್ತು ಅಲ್ಲಿನ ಗಡಿಯ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿದ್ದ ಮೇಜರ್ ಜನರಲ್ ಸುಧಾಕರ್ ಜೀ (ನಿವೃತ್ತ) ಹೇಳುತ್ತಾರೆ.

ಇದನ್ನು ಓದಿ: ಚೀನಾಗೆ ಠಕ್ಕರ್‌ ಕೊಡಲು ನಾಳೆಯಿಂದ 2 ದಿನ ಭಾರತೀಯ ವಾಯುಪಡೆ ಸಮರಾಭ್ಯಾಸ..!

ಇನ್ನು, ಈ ಪ್ರದೇಶದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಮೇಜರ್ ಜನರಲ್ ಸುಧಾಕರ್ (ನಿವೃತ್ತ), ಮೊದಲಿಗೆ LAC ಯಾದ್ಯಂತ ಟಿಬೆಟಿಯನ್ನರಿಗೆ ಅದರ ಆಧ್ಯಾತ್ಮಿಕ ಪ್ರಾಮುಖ್ಯತೆಯ ಬಗ್ಗೆ ಹೇಳಿದರು. ಈ ಪ್ರದೇಶವು ಹುಲ್ಲುಗಾವಲು ಪ್ರದೇಶ ಮಾತ್ರವಲ್ಲದೆ, ಚೀನಾದ ಕಡೆಯ ಗಡಿಯಿಂದ ಟಿಬೆಟಿಯನ್ನರು ಪೂಜಿಸುವ ಪವಿತ್ರ ಜಲಪಾತಕ್ಕೆ ಹೊಂದಿಕೊಂಡಿದೆ. ಹಾಗೆ, ತವಾಂಗ್ ಮೊನಾಸ್ಟರಿ ಲಾಸಾದ ಪೊಟಾಲಾ ಅರಮನೆಯ ನಂತರ ಎರಡನೇ ಅತಿದೊಡ್ಡ ಮೊನಾಸ್ಟರಿಯಾಗಿದೆ. ಅಲ್ಲದೆ, 6 ನೇ ದಲೈ ಲಾಮಾ ತವಾಂಗ್‌ ನವರಾಗಿದ್ದರು. ಇದರೊಂದಿಗೆ ತವಾಂಗ್‌ನ ಭೌಗೋಳಿಕ, ಸಾಮಾಜಿಕ-ಜನಾಂಗೀಯ, ಮತ್ತು ಸಾಂಸ್ಕೃತಿಕ ನಿರಂತರತೆ ಸುತ್ತಮುತ್ತಲ ಜನರೊಂದಿಗೆ ಇದೆ ಎಂದೂ ಅವರು ಹೇಳಿದರು. 

ಹಾಗೂ, ಈ ಪ್ರದೇಶದ ಆರ್ಥಿಕ ಪ್ರಾಮುಖ್ಯತೆಯ ಒಳನೋಟವನ್ನು ಸಹ ಮೇಜರ್ ಜನರಲ್ ಸುಧಾಕರ್ (ನಿವೃತ್ತ) ನೀಡಿದರು. "ಈ ಪ್ರದೇಶವು ನೈಸರ್ಗಿಕವಾಗಿ ಅಪರೂಪದ ಕಾಮೋತ್ತೇಜಕವನ್ನು ಬೆಳೆಯಲು ಹೆಸರುವಾಸಿಯಾಗಿದೆ ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಮತ್ತು ವೆಚ್ಚವನ್ನು ಹೊಂದಿದೆ. ಸ್ವಾಭಾವಿಕವಾಗಿ, ಚೀನೀಯರು ಇದರ ಲಾಭ ಪಡೆಯಲು ಬಯಸುತ್ತಾರೆ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಚೀನಾದ ತವಾಂಗ್‌ ತಂಟೆಗೆ ಬ್ರೇಕ್‌; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್‌: ಸಂಸತ್ತಿಗೆ ಕೇಂದ್ರ ಮಾಹಿತಿ

ಈ ಮಧ್ಯೆ, ಮಿಲಿಟರಿಯ ಪ್ರಾಮುಖ್ಯತೆಯ ಕುರಿತು ಹೇಳಿದ ನಿವೃತ್ತ ಜನರಲ್‌, ಸೇನೆಯ ಅರ್ಥದಲ್ಲಿ ಹೇಳುವುದಾದರೆ, ಈ ಪ್ರದೇಶವು ಭಾರತದ ಭಾಗದಲ್ಲಿರುವ ಸೆಲಾ ಪಾಸ್‌ನ ಪ್ರಾಬಲ್ಯ ಸಾಧಿಸಲು ಕಡಿಮೆ ವೈಮಾನಿಕ ದೂರವನ್ನು ಒದಗಿಸುತ್ತದೆ. ಹಾಗೆ, ಭಾರತದ ಭಾಗದಲ್ಲಿ ಪೂರ್ಣ ವೇಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿರುವುದರಿಂದ, ಸೆಲಾ ಪಾಸ್‌ನ ಕೆಳಗಿರುವ ಸುರಂಗವು ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಸಹ ಇತ್ತೀಚಿನ ಸೇನೆ -ಪಿಎಲ್‌ಎ ಘರ್ಷಣೆಗೆ ಒಂದು ಕಾರಣವಾಗಿರಬಹುದು ಎಂದು ಹೇಳಿದರು.

ಹಾಗೂ, ಇಂತಹ ಮುಖಾಮುಖಿಗಳನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸ್ಥಳೀಯ ಯುದ್ಧಗಳನ್ನು ಗೆಲ್ಲಲು ಹೋರಾಡುವುದು', ನಾಗರಿಕರಿಗೆ ವಿಸ್ತರಿಸಿದ ಪ್ರೋತ್ಸಾಹದೊಂದಿಗೆ 628 ಗಡಿ ಗ್ರಾಮಗಳನ್ನು ಪೂರ್ಣಗೊಳಿಸುವುದು ಇತ್ಯಾದಿ ಹೊಸ ಸಿದ್ಧಾಂತದ ಬೆಳಕಿನಲ್ಲಿ ನೋಡಬೇಕು. ಇನ್ನು, ಈ ವರ್ಷದ ಅಕ್ಟೋಬರ್‌ನಲ್ಲಿ ಚೀನಾ ಕಮ್ಯುನಿಸ್ಟ್‌ ಪಕ್ಷದ 20 ನೇ ಕಾಂಗ್ರೆಸ್‌ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಮೂರನೇ ಅವಧಿಗೆ ಅಧ್ಯಕ್ಷರಾಗಿದ್ದು, ಈ ಹಿನ್ನೆಲೆ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಆಕ್ರಮಣಕಾರಿ ಭಂಗಿಯು ಹೆಚ್ಚಾಗುವುದನ್ನು ಮುಂದುವರಿಸುತ್ತದೆ ಎಂದೂ ಮೇಜರ್‌ ಜನರಲ್‌ ಸುಧಾಕರ್‌ ( ನಿವೃತ್ತ) ಹೇಳುತ್ತಾರೆ. 

ಇದನ್ನೂ ಓದಿ: ರಾಜೀವ್‌ ಗಾಂಧಿ ಟ್ರಸ್ಟ್‌ಗೆ ಚೀನಾ ಹಣ; ಒಂದಿಂಚೂ ಜಾಗ ಬಿಟ್ಟುಕೊಡಲ್ಲ ಎಂದ ಅಮಿತ್ ಶಾ

Latest Videos
Follow Us:
Download App:
  • android
  • ios