
ಕೋವಿಡ್ ಸೋಂಕಿತರಿಗೆ ಇನ್ಮುಂದೆ ಪ್ಲಾಸ್ಮಾ ಥೆರಪಿ ಇಲ್ಲ, ಹೊಸ ಮಾರ್ಗಸೂಚಿ ಬಿಡುಗಡೆ
- ಕೋವಿಡ್ ನಿರ್ವಹಣೆ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಔಟ್- ಸೋಂಕಿತರ ಮೇಲೆ ಯಾವುದೇ ಪರಿಣಾಮ ಕಂಡುಬರದ ಹಿನ್ನೆಲೆ- ಪ್ಲಾಸ್ಮಾ ಚಿಕಿತ್ಸೆ ನೀಡುತ್ತಿರುವ ಕುರಿತು ಭಾರೀ ಪ್ರಮಾಣದ ದೂರುಗಳು
ನವದೆಹಲಿ (ಮೇ. 18):ಕೋವಿಡ್ ನಿರ್ವಹಣೆ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಅದರಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ.ಗಂಭೀರ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಿದ ಹೊರತಾಗಿಯೂ ಅವರು ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಸಾವಿನಿಂದ ಪಾರಾಗುತ್ತಿರುವ ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಇದರ ಸಾಧಕ- ಬಾಧಕಗಳ ಬಗ್ಗೆ ಡಾ. ವಿಶಾಲ್ ರಾವ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.