ತೆಲಂಗಾಣ ಸಿಎಂ ಆಯ್ಕೆ ಕಗ್ಗಂಟು : ದೆಹಲಿಗೆ ಹಾರಿದ ಡಿಕೆಶಿ, ಇಂದು ಸೋನಿಯಾ ನಿವಾಸದಲ್ಲಿ ಫೈನಲ್ ಸಭೆ
ತೆಲಂಗಾಣದಲ್ಲೂ ಕಾಂಗ್ರೆಸ್‌ಗೆ ಸಿಎಂ ಆಯ್ಕೆ ಕಗ್ಗಂಟು
ತೆಲಂಗಾಣದಲ್ಲಿ ಇಬ್ಬರಿಗೆ ‘ಡಿಸಿಎಂ ಪಟ್ಟ’ ಕಟ್ತಾರಾ..?
ಬುಡಕಟ್ಟು ನಾಯಕಿ ಸೀತಕ್ಕಗೆ DCM ಹುದ್ದೆ ಸಿಗುತ್ತಾ?
ಕರ್ನಾಟಕದ ಹಾಗೆ ತೆಲಂಗಾಣದಲ್ಲೂ ಸಿಎಂ ಆಯ್ಕೆ ಕಗ್ಗಂಟು ಕಾಂಗ್ರೆಸ್‌ಗೆ ಶುರುವಾಗಿದೆ. ಕಾಂಗ್ರೆಸ್‌ನ(Congress) ಹಿರಿಯ ನಾಯಕ ಉತ್ತಮಕುಮಾರ್ ರೆಡ್ಡಿ(Uttam Kumar Reddy) ಮತ್ತು ರೇವಂತ್ ರೆಡ್ಡಿ(Revanth Reddy) ನಡುವೆ ಸಿಎಂ ಪಟ್ಟಕ್ಕಾಗಿ(CM post) ಫೈಟ್ ನಡೆಯುತ್ತಿದೆ. ರೇವಂತ್ ರೆಡ್ಡಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. 13 ಶಾಸಕರ ಹೆಸರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ಇವರೆಲ್ಲಾ ಸಿಎಂ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ. ಇಂದು ಸೋನಿಯಾ ಗಾಂಧಿ ಮನೆಯಲ್ಲಿ ಫೈನಲ್ ಸಭೆ ನಡೆಯಲಿದೆ. ಆದ್ರೆ ಉತ್ತಮಕುಮಾರ್ ರೆಡ್ಡಿ ನಾನೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಂತೆ ಕಾಣುತ್ತಿದೆ.
ಇದನ್ನೂ ವೀಕ್ಷಿಸಿ: ಸಿಎಂ ಸ್ಥಾನಕ್ಕೆ ಬಂಡಾಯವೇಳ್ತಾರಾ ವಸುಂಧರಾ ರಾಜೆ? ಏಳು ಆಕಾಂಕ್ಷಿಗಳು..ಯಾರಿಗೆ ಸಿಗಲಿದೆ ಗದ್ದುಗೆ?