ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದು ಅಯೋಧ್ಯೆ : ಇದರ ಇತಿಹಾಸ, ಮಹತ್ವವೇನು ?

ಅಯೋಧ್ಯೆಯೂ ಸರಯೂ ನದಿಯ ತಟದಲ್ಲಿ ಇದೆ. ಇಲ್ಲಿ 7 ಸಾವಿರ ಮಂದಿರಗಳಿದ್ದವು ಎಂದು ಇತಿಹಾಸ ಹೇಳುತ್ತದೆ. ಈ ಸ್ಥಳದ ಇತಿಹಾಸವೇನು ಎಂದು ತಿಳಿಯೋಣಾ ಬನ್ನಿ..

First Published May 28, 2023, 12:42 PM IST | Last Updated May 28, 2023, 12:42 PM IST

ಅಯೋಧ್ಯೆ ಹಿಂದೂಗಳ ಪವಿತ್ರ ನಗರಗಳಲ್ಲಿ ಒಂದಾಗಿದೆ. ಇದು ರಾಮಾಯಣದ ಜೊತೆ ನಿಕಟ ಸಂಬಂಧವನ್ನು ಹೊಂದಿದೆ.  ಅಲ್ಲದೇ ರಾಮನ ಜನ್ಮಸ್ಥಳ ಎಂದು ಸಹ ಹೇಳಲಾಗುತ್ತದೆ. ಇದು ಸಮೃದ್ಧ ಹಾಗೂ ಸುಸಜ್ಜಿತವಾಗಿದ್ದು, ಇಲ್ಲಿ ಹಲವಾರು ಜನ ವಾಸಿಸುತ್ತಿದ್ದಾರೆ. ಈ ನಗರದಲ್ಲಿ ಗೌತಮ ಬುದ್ಧ ಕೆಲ ಕಾಲ ನೆಲೆಸಿದ್ದ ಎಂದು ಹೇಳಲಾಗುತ್ತದೆ.ಇದಕ್ಕೆ ಪುಷ್ಟಿ ನೀಡುವಂತೆ 100ಕ್ಕೂ ಹೆಚ್ಚು ವಿಹಾರ, ಸ್ತೂಪ ಸೇರಿದಂತೆ ಹಲವು ಸ್ಮಾರಕಗಳು ಇಲ್ಲಿ ದೊರಕಿವೆ. ಸರಯೂ ನದಿಯ ತಟದಲ್ಲಿ ಅಯೋಧ್ಯೆ ಇದೆ. ಅಯೋಧ್ಯೆಯು ದೇವರಿಂದ ನಿರ್ಮಾಣವಾಗಿದೆ ಎಂದು ಅಥರ್ವವೇದ ಉಲ್ಲೇಖಿಸುತ್ತದೆ. ಅಲ್ಲದೇ ರಾಮಾಯಣ, ಹಿಂದೂ ಪುರಾಣಗಳಲ್ಲಿ ಅಯೋಧ್ಯೆಯ ಉಲ್ಲೇಖವಿದೆ.  

ಇದನ್ನೂ ವೀಕ್ಷಿಸಿ: ಇಂದು ನಿಮ್ಮ ದಿನ ಭವಿಷ್ಯ ಹೇಗಿದೆ? : ಕಷ್ಟ ಪರಿಹಾರಕ್ಕೆ ಅಮ್ಮನವರಿಗೆ ಶ್ವೇತ ವರ್ಣದ ಪುಷ್ಪದಿಂದ ಅರ್ಚನೆ ಮಾಡಿ..