ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ: ರಾಜಧಾನಿ ಸುತ್ತುವರಿದ ಯಮುನಾ..!

ನಿರಂತರ ಮಳೆಗೆ ಉತ್ತರ ಭಾರತ ಅಕ್ಷರಶ ಸುಸ್ತು
ಸದ್ಯಕ್ಕೆ ಇದು ಉತ್ತರ ಭಾರತವಲ್ಲ.. ಜಲ ಭಾರತ 
ರಾಜಧಾನಿ ದೆಹಲಿಯಲ್ಲಿ 40 ವರ್ಷಗಳ ದಾಖಲೆ ಮಳೆ
 

Share this Video
  • FB
  • Linkdin
  • Whatsapp

ನಿರಂತರ ಮಳೆಗೆ ಉತ್ತರ ಭಾರತ ಅಕ್ಷರಶ ಸುಸ್ತಾಗಿದೆ. ಮಳೆ (Rain) ಬಿಟ್ಟು ಬಿಡದಂತೆ ಅಬ್ಬರಿಸುತ್ತಿದೆ. ಉತ್ತರ ಭಾರತ(North India) ಈಗ ಜಲಭಾರತವಾಗಿದೆ. ಕಂಡಲ್ಲೆಲ್ಲ ನೀರು. ಅದ್ರಲ್ಲೂ, ಪಂಚಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ(Himachala pradesh) ಮತ್ತು ಉತ್ತರಾಖಂಡ ರಾಜ್ಯಗಳು ನಿರಂತರ ಮಳೆಗೆ ಅತ್ಯಂತ ಸಂಕಷ್ಟದ ಸುಳಿಗೆ ಸಿಲುಕಿವೆ. ಉತ್ತರ ಭಾತರದಲ್ಲಿ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದೆ. ಕಳೆದ ಕೆಲ ದಿನಗಳಿಂಬಿ ಬಿಟ್ಟು ಬಿಡದಂತೆ ಮಳೆ ಸುರಿದ ಪರಿಣಾಮ, ಇಡೀ ಉತ್ತರ ಭಾರತ ಜಲದಿಗ್ಬಂಧನಕ್ಕೊಳಗಾಗಿದೆ. ಉತ್ತರ ಭಾರತದ ಐದು ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದ್ರೆ, ನದಿ, ಹಳ್ಳಕೊಳ್ಳಗಳೆಲ್ಲ ಏಕಾಗಿವೆ. ಈ ರಾಜ್ಯಗಳಲ್ಲಿ ಅನೇಕ ಗ್ರಾಮಗಳು ದ್ವೀಪಗಳಾಗಿವೆ. ದೇಶದ ರಾಜಧಾನಿ ದೆಹಲಿ ಸುತ್ತ ಮುತ್ತ ನಿರಂತರ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಯಮುನಾ ನದಿ ದೊಡ್ಡ ಪ್ರಮಾಣದಲ್ಲಿ ಉಕ್ಕಿ ಹಿರಿಯುತ್ತಿದೆ. ರಾಜಧಾನಿ ದೆಹಲಿ ಜನರ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ದೆಹಲಿಯ ರಸ್ತೆಗಳು, ಅಂಡರ್ಪಾಸ್ಗಳು, ಮಾರುಕಟ್ಟೆ ಮತ್ತು ಆಸ್ಪತ್ರೆಗಳಲ್ಲಿ ಪ್ರವಾಹ ತಾಂಡವವಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ದಲಿತ ಹುಡುಗನ ಬೆಳವಣಿಗೆ ಸಹಿಸದೇ ಕೊಲೆ: ಚಕ್ರವರ್ತಿ ಸೂಲಿಬೆಲೆ

Related Video