
ಉತ್ತರಾಖಂಡದಲ್ಲಿ ಮೇಘಸ್ಫೋಟ, 200 ಮಂದಿ ಕಣ್ಮರೆ ಶಂಕೆ: ಪಶ್ಚಿಮದಲ್ಲಿ ವರುಣ ವಿನಾಶ ರೂಪ..!
ಪುನರ್ವಸು ಅಬ್ಬರಕ್ಕೆ ಉತ್ತರ ತತ್ತರ..!
ವರುಣಾರ್ಭಟಕ್ಕೆ ನಡುಗಿದ ಬೆಟ್ಟ ಗುಡ್ಡ..!
ಮಳೆ ಅಟ್ಟಹಾಸಕ್ಕೆ ಕುಸಿದ ದೆಹಲಿ ರೋಡ್‌ಗಳು
ಜುಲೈ ಮಳೆ ಕರ್ನಾಟಕದ ಕರಾವಳಿಯಲ್ಲಿ ಅಲ್ಲೊಲ-ಕಲ್ಲೋಲ ಸೃಷ್ಟಿಸಿದೆ. ಕರ್ನಾಟಕದಲ್ಲಿ (Karnataka) 3 ದಿನ ಪುನರ್ವಸು ಮಳೆ ಅಬ್ಬರಿಸಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಭಾರತದಲ್ಲಿ ಪುನರ್ವಸು ಮಳೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಉತ್ತರಾಖಂಡದಲ್ಲಿ ಮೇಘಸ್ಫೋಟಗೊಂಡು 200 ಮಂದಿಯ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ದೇಶದ ಹಲವೆಡೆ ಭಾರೀ ಮಳೆ(Rain) ಯಾಗುತ್ತಿದ್ದು, ಕೆಲವು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ” “ರೆಡ್ ಹಾಗೂ ಆರೆಂಜ್ ಅಲರ್ಟ್' ಘೋಷಿಸಿದೆ. ಗೋವಾ ಮತ್ತು ಕೇರಳಕ್ಕೆ(Kerala) ರೆಡ್ ಅಲರ್ಟ್ ಘೋಷಿಸಲಾಗಿದೆ.ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ದೊಡ್ಡ ದೊಡ್ಡ ನಾಯಕರೇ ಸರ್ವನಾಶದ ಆತಂಕದ ಚಿಂತೆಯಲ್ಲಿದ್ದಾರೆ. ಹಿಮಪಾತ, ಹಿಮಗುಡ್ಡ ಕುಸಿಯುವುದು., ಪ್ರವಾಹ, ಗುಡ್ಡ ಕುಸಿತ, ಮನೆ ಕುಸಿತ, ಜನರ ರಕ್ಷಣೆ, ನದಿಗಳ ಹರಿವು, ಕಾಡ್ಗಿಚ್ಚು, ಕಡಿಗೆ ಬೆಂಕಿ, ಮನೆಗಳಿಗೆ ಬೆಂಕಿ. ಭೂಕಂಪ..ಸುನಾಮಿ..ಸಾಲು ಸಾಲು ಸವಾಲುಗಳಿಂದ ಮಾನವ ತತ್ತರಿಸಿದ್ದಾನೆ.
ಇದನ್ನೂ ವೀಕ್ಷಿಸಿ: ಸಿದ್ದು ಬತ್ತಳಿಕೆಯಿಂದ ಸಿಡಿಯಿತು ಗ್ಯಾರಂಟಿ ಅಸ್ತ್ರ.. ರೈತಾಸ್ತ್ರ: ಹೇಗಿದೆ ಗೊತ್ತಾ “ಬಜೆಟ್”ರಾಮಯ್ಯ ಹೆಣೆದ “ಲೋಕ”ವ್ಯೂಹ..?