Asianet Suvarna News Asianet Suvarna News

ಕಡಲ ಕಿನಾರೆಗೆ ತೇಲಿ ಬಂತು ದೈತ್ಯ ಡಾಲ್ಫಿನ್!

Aug 2, 2021, 5:34 PM IST

ಕೋಲ್ಕತ್ತಾ(ಆ.02): ಪಶ್ಚಿಮ ಬಂಗಾಳದ ಬಖಾಲಿಯ ಲಕ್ಷ್ಮಿಪುರ ಸಮುದ್ರ ಕಿನಾರೆಯಲ್ಲಿ ಭಾನುವಾರ ಬೆಳಿಗ್ಗೆದೈತ್ಯ ಡಾಲ್ಫಿನ್ ಒಂದು ಪತ್ತೆಯಾಗಿದೆ. ಸುಮಾರು 17.38 ಅಡಿ ಉದ್ದದ ಈ ಡಾಲ್ಫಿನ್ ಕಂಡು ಜನರು ಅಚ್ಚರಿಗೀಡಾಗಿದ್ದಾರೆ.

ಸಾಮಾನ್ಯವಾಗಿ ಗಂಗಾ ನದಿಯಲ್ಲಿ ಕಂಡು ಬರುವ ಈ ಡಾಲ್ಫಿನ್ ಕಡಲ ಕಿನಾರೆಯಲ್ಲಿ ಸತ್ತು ಬಿದ್ದಿದೆ. ಈ ಡಾಲ್ಫಿನ್ ಶನಿವಾರ ರಾತ್ರಿ ಸಮುದ್ರದ ಅಲೆಗಳೊಂದಿಗೆ ದಡಕ್ಕೆ ತೇಲಿ ಬಂದಿದೆ, ಆದರೆ ಬಳಿಕ ಮತ್ತೆ ಸಮುದ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಇನ್ನು ಭಾನುವಾರ ಬೆಳಿಗ್ಗೆ ಡಾಲ್ಫಿನ್ ಬಿದ್ದಿರುವುದನ್ನು ಕಂಡ ಮೀನುಗಾರರು ತಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಇದನ್ನು ರಕ್ಷಿಸುವ ಮೊದಲೇ ಅದು ಅತ್ತಿದೆ. 

ಗಂಗೆಯ ಡಾಲ್ಫಿನ್ ಅನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಪರಿಗಣಿಸಲಾಗಿದೆ. ಇದು ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅನುಸೂಚಿ I ರ ಅಡಿಯಲ್ಲಿ ಬರುತ್ತದೆ. ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಇದನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಘೋಷಿಸಿದೆ.