Omicron Variant: 1963 ರಲ್ಲಿ ರಿಲೀಸ್ ಆಗಿತ್ತಾ ಒಮಿಕ್ರಾನ್ ಮೇಲೆ ಸಿನಿಮಾ.?

ದ. ಆಫ್ರಿಕಾದಿಂದ (South Africa) ಬಂದ ಒಬ್ಬರಿಗೆ ಹಾಗೂ ಸ್ಥಳೀಯವಾಗಿ ಒಬ್ಬರಿಗೆ ‘ಒಮಿಕ್ರಾನ್‌’ (Omicron Variant)ತಳಿಯ ಕೊರೋನಾ ಸೋಂಕು ತಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮೊದಲ ಹಾಗೂ 2ನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ‘ಕಠಿಣ ಮಾರ್ಗಸೂಚಿ’ಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 04): ದ. ಆಫ್ರಿಕಾದಿಂದ(South Africa) ಬಂದ ಒಬ್ಬರಿಗೆ ಹಾಗೂ ಸ್ಥಳೀಯವಾಗಿ ಒಬ್ಬರಿಗೆ ‘ಒಮಿಕ್ರಾನ್‌’ ತಳಿಯ (Omicron Variant) ಕೊರೋನಾ ಸೋಂಕು ತಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವು ಮೊದಲ ಹಾಗೂ 2ನೇ ಕೋವಿಡ್‌ ಅಲೆ ನಿಯಂತ್ರಣಕ್ಕೆ ಹೇರಲಾಗಿದ್ದ ‘ಕಠಿಣ ಮಾರ್ಗಸೂಚಿ’ಗಳನ್ನು ಮತ್ತೆ ಜಾರಿಗೊಳಿಸಲು ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Omicron Threat: ಒಮಿಕ್ರೋನ್ ಎಷ್ಟು ಡೇಂಜರ್..? ತಿಳಿದಿರಬೇಕಾದ ಸತ್ಯಗಳು

ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಲನಚಿತ್ರ ಮಂದಿರ/ಮಲ್ಟಿಪ್ಲೆಕ್ಸ್‌ ಹಾಗೂ ಮಾಲ್‌ಗಳಲ್ಲಿ ಪ್ರವೇಶಿಸುವವರಿಗೆ ಎರಡು ಡೋಸ್‌ ಲಸಿಕೆ (2 nd Dose) ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಜತೆಗೆ 18 ವರ್ಷದೊಳಗಿನ ಶಾಲಾ-ಕಾಲೇಜು ಮಕ್ಕಳಿರುವ ಪೋಷಕರು, ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದರೆ ಎರಡೂ ಡೋಸ್‌ ಲಸಿಕೆ ಕಡ್ಡಾಯ ಮಾಡಲಾಗಿದೆ.

ಇನ್ನೊಂದೆಡೆ ಕೊರೋನಾದ ಹೊಸ ತಳಿಯಾದ ‘ಒಮಿಕ್ರೋನ್‌’ ಮೇಲೆ ಕೋವಿಡ್‌ ಲಸಿಕೆಗಳು ಪರಿಣಾಮ ಬೀರದು ಎಂಬ ವಾದಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇವೆಲ್ಲಾ ಒಂದೆಡೆಯಾದರೆ, ಒಮಿಕ್ರಾನ್ ಬಗ್ಗೆ ಸಿನಿಮಾವೊಂದರಲ್ಲಿ ಹೇಳಲಾಗಿದೆ. ಏನು ಹೇಳಲಾಗಿದೆ..? ಇಲ್ಲಿದೆ ವರದಿ. 

Related Video