Farmers Protest: 'ದೆಹಲಿ ಚಲೋ'ಗೆ ಬೆಸ್ತು ಬಿದ್ದ ಪೊಲೀಸ್ ಪಡೆ: ಖಾಕಿ ಡ್ರೋನ್‌ಗೆ ಟಕ್ಕರ್ ಕೊಟ್ಟ ರೈತರ ಗಾಳಿಪಟಗಳು !
ಪಂಜಾಬ್-ಹರಿಯಾಣ ಶಂಭು ಗಡಿಯಲ್ಲಿ ಭಾರಿ ಉದ್ವಿಗ್ನ
ಪ್ರತಿಭಟನಾನಿರತ ರೈತರು-ಪೊಲೀಸರು ನಡುವೆ ಘರ್ಷಣೆ
ರೈತರನ್ನ ಚದುರಿಸಲು ಅಶ್ರುವಾಯು, ಶೆಲ್‌ಗಳ ದಾಳಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ನದಾತರ ಕಿಚ್ಚು ಜೋರಾಗಿದೆ. ದೆಹಲಿ ಚಲೋ(Delhi Chalo) ಇನ್ನೂ ಮುಗಿಯದೇ, ಇಂದೂ ಕೂಡ ಮುಂದುವರೆದಿದೆ. ಹರಿಯಾಣ ಅಂಬಾಲಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹರಿಯಾಣ ಗಡಿಗಳಲ್ಲಿ ಬ್ಯಾರಿಕೇಡ್‌ನನ್ನು ರೈತರು(Farrmers) ಕಿತ್ತೆಸೆಯುತ್ತಿದ್ದಾರೆ. ಪಂಜಾಬ್‌ನಿಂದ(Punjab) ಹರಿಯಾಣದ ಗಡಿಗಳಿಗೆ ಬರುತ್ತಿದ್ದಾರೆ. ರಸ್ತೆ ಬಿಟ್ಟು ಹೊಲಗಳ ಮೂಲಕ ದೆಹಲಿಯತ್ತ ಟ್ರ್ಯಾಕ್ಟರ್(Tractor) ಜೊತೆಗೆ ರೈತರು ಆಗಮಿಸುತ್ತಿದ್ದಾರೆ. ರೈತರ ಹೋರಾಟದಿಂದ ದೆಹಲಿ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದ್ದು, 6 ತಿಂಗಳಿಗೆ ಆಗುವಷ್ಟು ಸರಕಿನೊಂದಿಗೆ ರೈತರು ಬಂದಿದ್ದಾರೆ. ಪಂಜಾಬ್‌ನಿಂದ ದೆಹಲಿಯತ್ತ 2000ಕ್ಕೂ ಅಧಿಕ ಟ್ರ್ಯಾಕ್ಟರ್ಸ್‌ಗಳು ಬರುತ್ತಿವೆ.
ಇದನ್ನೂ ವೀಕ್ಷಿಸಿ: ಮುಸ್ಲಿಂ ದೇಶವಾದ್ರೂ ಭಾರತದ ಸ್ನೇಹಕ್ಕೆ ಮನ್ನಣೆ: ಅರಬ್ ದೊರೆಗಳ ನಾಡಲ್ಲಿ ಹಿಂದೂ ದೇವಾಲಯ ಲೋಕಾರ್ಪಣೆ