ರೆಮ್‌ಡೆಸಿವಿರ್ ಪರಿಣಾಮಕಾರಿಯಲ್ವಾ.? ಮಾರ್ಗಸೂಚಿಯಿಂದ ಕೈ ಬಿಡ್ತಿರೋದ್ಯಾಕೆ..?
- ಪ್ಲಾಸ್ಮಾ ಆಯ್ತು, ರೆಮ್‌ಡೆಸಿವಿರ್‌ಗೂ ತಿಲಾಂಜಲಿ ಸಾಧ್ಯತೆ
- ರೆಮ್‌ಡೆಸಿವಿರ್ ಪರಿಣಾಮಕಾರಿಯಲ್ಲ: ತಜ್ಞರು
- 2 ನೇ ಅಲೆಯಲ್ಲಿ ಗಂಭೀರ ಸೋಂಕಿತರಿಗೆ ರೆಮ್‌ಡೆಸಿವಿರ್‌ನ್ನು ಹೆಚ್ಚಾಗಿ ಬಳಸಲಾಗುತ್ತಿದೆ
ಬೆಂಗಳೂರು (ಮೇ. 21): ಕೊರೊನಾ ಸೋಂಕಿತರಲ್ಲಿ ಭರವಸೆ ಮೂಡಿಸಿದ್ದ, ರೆಮ್‌ಡಿಸಿವಿರ್ ಇಂಜೆಕ್ಷನ್‌ನನ್ನು ಕೊರೋನಾ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಕೈ ಬಿಡುವ ಸಾಧ್ಯತೆ ಇದೆ.
ಎರಡನೇ ಅಲೆಯಲ್ಲಿ ಗಂಭೀರ ಸೋಂಕಿತರು ಹೆಚ್ಚಾದ ಕಾರಣ ಅವರಿಗೆ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ವ್ಯಾಪಕವಾಗಿ ಪ್ರಯೋಗಿಸಲಾಗುತ್ತಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಉತ್ಪಾದನೆ ಆಗದೇ ದೇಶಾದ್ಯಂತ ಈ ಚುಚ್ಚುಮದ್ದಿಗೆ ಹಾಹಾಕಾರ ಸೃಷ್ಟಿಯಾಗಿದೆ. ರೆಮ್‌ಡಿಸಿವಿರ್ ಪರಿಣಾಮಕಾರಿ ಎಂದು ಸಾಬೀತಾಗದ ಹಿನ್ನೆಲೆಯಲ್ಲಿ ಇದನ್ನು ಕೈಬಿಡಬೇಕೆಂದು ತಜ್ಞರು ಹೇಳಿದ್ದಾರೆ. ಹಾಗಾದರೆ ರೆಮ್‌ಡಿಸಿವಿರ್‌ಗೆ ಪರ್ಯಾಯವೇನು..?