ಮೋದಿ ಗ್ಯಾರಂಟಿ ಎದುರು ವರ್ಕೌಟ್‌ ಆಗಿಲ್ವಾ ಕಾಂಗ್ರೆಸ್‌ ಗ್ಯಾರಂಟಿ? ಮೋದಿಗೆ ಅಧಿಕಾರ ಎಂದ ಎಕ್ಸಿಟ್ ಪೋಲ್‌ಗಳು !

ಎಕ್ಸಿಟ್ ಪೋಲ್ ಸಂಖ್ಯೆ ನಂಬಲ್ಲ ಎಂದ ಕಾಂಗ್ರೆಸ್ ನಾಯಕರು
I.N.D.I.A ಮೈತ್ರಿಕೂಟಕ್ಕೆ 295 ಸ್ಥಾನವೆಂದ ಮಲ್ಲಿಕಾರ್ಜುನ ಖರ್ಗೆ
ಈ ಬಾರಿ 295ಕ್ಕೂ ಹೆಚ್ಚು ಸ್ಥಾನ ಎಂದು ಖರ್ಗೆ ಭರವಸೆಯ ಮಾತು

First Published Jun 2, 2024, 9:46 AM IST | Last Updated Jun 2, 2024, 9:47 AM IST

ಲೋಕಸಮರದಲ್ಲಿ(Lok Sabha Election 2024) ನರೇಂದ್ರ ಮೋದಿಗೆ(Narendra Modi) ಗದ್ದುಗೆ ಎಂದು ಮತಗಟ್ಟೆ ಸಮೀಕ್ಷೆಗಳು(Exit Poll) ಹೇಳಿವೆ. ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯನ್ನು ಚುನಾವಣೋತ್ತರ ಸರ್ವೆಗಳು ನೀಡಿವೆ. ಎಲ್ಲಾ ಮತಗಟ್ಟೆ ಸಮೀಕ್ಷೆಯಲ್ಲೂ ಮೋದಿಗೆ ಅಧಿಕಾರ ದೊರೆಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಮೋದಿ ಚಾರ್​ ಸೌ ಪಾರ್ ನಿಜವಾಗಬಹುದು ಎಂದು ಕೆಲ ಸಮೀಕ್ಷೆಗಳು ಹೇಳಿವೆ. ಕೆಲವು ಸಮೀಕ್ಷೆಗಳಲ್ಲಿ ಎನ್‌​​ಡಿಎಗೆ(NDA) 400ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದಿವೆ. ಬಹುತೇಕ ಸಮೀಕ್ಷೆಗಳಲ್ಲಿ ಎನ್‌​ಡಿಎಗೆ 350-370 ಸ್ಥಾನದ ದೊರೆಯುವ ಭವಿಷ್ಯ ನುಡಿಯಲಾಗಿದೆ. ದೇಶದ ಜನ ಅಭಿವೃದ್ಧಿ ಪರ ಮತ ಹಾಕಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ರೆ, ಕುಟುಂಬ ರಾಜಕಾರಣದ ಇಂಡಿಯಾ ಮೈತ್ರಿಕೂಟ ವಿಫಲವಾಗಿದೆ. ಎನ್‌​ಡಿಎ ಮರು ಆಯ್ಕೆಗೆ ಜನ ಮತಹಾಕಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  News Hour: ಮೂರನೇ ಬಾರಿಯೂ ಮೋದಿಗೆ ದೇಶದ ಅಧಿಕಾರ ಎಂದ ಸಮೀಕ್ಷೆ!