News Hour: ಮೂರನೇ ಬಾರಿಯೂ ಮೋದಿಗೆ ದೇಶದ ಅಧಿಕಾರ ಎಂದ ಸಮೀಕ್ಷೆ!


ಲೋಕಸಭಾ ಸಮರದ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದೆ. ಮತ್ತೆ ಎನ್‌ಡಿಎಗೆ ಬಹುಮತ ಸಿಗಲಿದೆ ಎಂದು ಚುನಾವಣೋತ್ತರ ಸರ್ವೆ ಹೇಳಿದೆ.  3ನೇ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ನಿರಾಸೆ ಸಾಧ್ಯತೆ ಇದೆ.
 

First Published Jun 1, 2024, 11:51 PM IST | Last Updated Jun 1, 2024, 11:51 PM IST

ಬೆಂಗಳೂರು (ಜೂ.1): ಚುನಾವಣೋತ್ತರ ಸಮೀಕ್ಷೆಯಲ್ಲಿ ದೊಡ್ಡ ರಾಜ್ಯಗಳಲ್ಲಿ ಕೇಸರಿ ಪಡೆ ಕಮಾಲ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಬಂಗಾಳದಲ್ಲಿ ಟಿಎಂಸಿಗಿಂತಲೂ ಬಿಜೆಪಿಗೆ ಹೆಚ್ಚು ಸ್ಥಾನ ಎಂದು ಮತಗಟ್ಟೆ ಸಮೀಕ್ಷೆ ಹೇಳಿದೆ. ಯುಪಿ,ಬಿಹಾರ, ಮಹಾರಾಷ್ಟ್ರದಲ್ಲಿ ದಾಖಲೆ ಗೆಲುವು ಸಿಗಲಿದೆ ಎಂದಿದೆ.

ದಕ್ಷಿಣ ಭಾರತದಲ್ಲಿ ಮೋದಿ ಗ್ಯಾರಂಟಿಗೆ ಜನ ಹೆಚ್ಚೂ ಕಡಿಮೆ ಜೈ ಎಂದಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ತಮಿಳುನಾಡು, ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದ್ದರೆ,  ತೆಲಂಗಾಣದಲ್ಲಿ ಬಿಜೆಪಿ- ಕಾಂಗ್ರೆಸ್ ಸಮಬಲದ ಹೋರಾಟ ನಡೆಯಲಿದೆ.

Exit Poll: ನರೇಂದ್ರ ಮೋದಿಗೆ ಮೂರನೇ ಬಾರಿ ಪ್ರಧಾನಿ ಸೀಟ್‌, ರಾಜ್ಯದಲ್ಲಿ ಕಾಂಗ್ರೆಸ್‌ಗಿಲ್ಲ ಡಬಲ್‌ ಡಿಜಿಟ್‌!

ದೇಶದಲ್ಲಿ ಲೋಕಸಭೆ ಚುನಾವಣೆಯ ಎಕ್ಸಿಟ್‌ ಪೋಲ್‌ ಬಹಿರಂಗವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, ಎನ್‌ಡಿಎ ಸರ್ಕಾರದ ಅಭಿವೃದ್ಧಿ ಪರ ಜನ ಮತ ಹಾಕಿದ್ದಾರೆ ಎಂದಿದ್ದಾರೆ.