News Hour: ಸಂಸತ್ ಕಲಾಪದಲ್ಲೂ ಪ್ರತ್ಯೇಕ ರಾಷ್ಟ್ರದ ಕಿಚ್ಚು: ಡಿ.ಕೆ. ಸುರೇಶ್ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು !
ಡಿಕೆ ಸುರೇಶ್ ಹೇಳಿಕೆಗೆ ಖಂಡನೆ, ಮುಗಿಬಿದ್ದ BJP ನಾಯಕರು
ದೇಶಕ್ಕೆ ಕ್ಷಮೆಯಾಚಿಸಿ.. ಡಿಕೆ ಸುರೇಶ್ ವಿರುದ್ಧ ಕ್ರಮಕ್ಕೆ ಆಗ್ರಹ
ಸಂಸದ ಡಿಕೆ ಸುರೇಶ್ ಮಾತು ಸಹಿಸಲ್ಲ ಎಂದು ಖರ್ಗೆ ಸ್ಪಷ್ಟನೆ!
ಅನುದಾನ ಅನ್ಯಾಯ ಆಗ್ತಿದೆ ಎಂದು ಟೀಕೆ ಮಾಡುತ್ತಾ ಕಾಂಗ್ರೆಸ್(Congress) ಸಂಸದ ಡಿ.ಕೆ. ಸುರೇಶ್(DK Suresh) ದೇಶವನ್ನೇ ಒಡೆಯುವ ಮಾತಾಡಿದ್ದಾರೆ. ಕಾಂಗ್ರೆಸ್ ಸಂಸದನ ಈ ಹೇಳಿಕೆ ದೇಶಾದ್ಯಂತ ಕಿಚ್ಚೆಬ್ಬಿಸಿದೆ. ಸದನದಲ್ಲೂ ಬಿಜೆಪಿ(BJP) ಸದಸ್ಯರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಈ ಬೆನ್ನಲ್ಲೇ ರಾಜ್ಯಸಭೆಯಲ್ಲೂ ಮಾತಾಡಿದ ಖರ್ಗೆ(Mallikarjun Kharge), ದೇಶ ಒಡೆಯುವ ಮಾತನ್ನೂ ಸಹಿಸಲ್ಲ. ತಪ್ಪಿದ್ದರೆ ಹಕ್ಕುಚ್ಯುತಿಗೆ ಕೊಡಿ ಎಂದು ಕೂಡ ಮನವಿ ಮಾಡಿದ್ರು. ಅತ್ತ ಲೋಕಸಭೆಯಲ್ಲೂ(Loksabha) ಜೋಶಿ, ಕಾಂಗ್ರೆಸ್ ದೇಶದ ಕ್ಷಮೆಯಾಚಿಸಲಿ ಎಂದು ಆಗ್ರಹ ಮಾಡಿದ್ರು. ಲೋಕಸಭೆ ಹೊತ್ತಲ್ಲಿ ಬಿಜೆಪಿಗೆ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಮಿಷನ್ ಅಸ್ತ್ರ ಹಿಡಿದೇ ಬಿಜೆಪಿ ವಿರುದ್ಧ ದಾಳಿ ನಡೆಸಿ, ಅಧಿಕಾರ ಹಿಡಿದಿದೆ. ಈಗ ಇದೇ ಅಸ್ತ್ರವೇ ಕಾಂಗ್ರೆಸ್‌ಗೆ ಯೂಟರ್ನ್ ಆಗಿದೆ. ಹಾಸನದಲ್ಲಿ ಮಾತಾಡಿದ ಹಿರಿಯ ಕಾಂಗ್ರೆಸ್ ನಾಯಕ ಬಿ ಶಿವರಾಂ(B Shivaram), ನಮ್ಮ ಸರ್ಕಾರದಲ್ಲೂ ಶೇ.40ಕ್ಕಿಂತಲೂ ಹೆಚ್ಚು ಕಮಿಷನ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆಯೂ ಆಡಳಿತರೂಢ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ.
ಇದನ್ನೂ ವೀಕ್ಷಿಸಿ: Ayodhya Ram Mandir: ತಿರುಪತಿಯನ್ನೂ ಮೀರಿಸುತ್ತಾ ಅಯೋಧ್ಯೆ..? ದಿನಕ್ಕೆ ತಿರುಪತಿ ದೇಣಿಗೆ ಎಷ್ಟು..? ಅಯೋಧ್ಯೆಗೆ ಎಷ್ಟು..?