Ayodhya Ram Mandir: ತಿರುಪತಿಯನ್ನೂ ಮೀರಿಸುತ್ತಾ ಅಯೋಧ್ಯೆ..? ದಿನಕ್ಕೆ ತಿರುಪತಿ ದೇಣಿಗೆ ಎಷ್ಟು..? ಅಯೋಧ್ಯೆಗೆ ಎಷ್ಟು..?

ನಿತ್ಯ 2 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ
11 ದಿನಗಳಲ್ಲಿ ಹುಂಡಿಗೆ ಬಿದ್ದ ದುಡ್ಡು 8 ಕೋಟಿ 
ಆನ್‌ಲೈನ್‌.. ಚೆಕ್ ಮೂಲಕ 3 ಕೋಟಿ ಮೊತ್ತ
ರಾಮಲಲ್ಲಾನ ದರ್ಶನಕ್ಕೆ ನಿತ್ಯ ಜಾತ್ರೆಯ ಸಾಗರ

First Published Feb 3, 2024, 9:09 AM IST | Last Updated Feb 3, 2024, 9:10 AM IST

ಅಯೋಧ್ಯೆ ರಾಮ ಮಂದಿರ(Ram Mandir) ಉದ್ಘಾಟನೆ ಆಗಿದ್ದೇ ಆಗಿದ್ದು, ನಿತ್ಯ ಎರಡು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಹರಿದು ಬರುತ್ತಿದ್ದಾರೆ. ಜಾತ್ರೆಯಂತೆ ನಿತ್ಯ ಬರುತ್ತಿರುವ ಭಕ್ತರನ್ನು ನಿಭಾಯಿಸುವುದು ರಾಮ ಟ್ರಸ್ಟ್ ಮಂಡಳಿಗೆ ಕಷ್ಟವಾಗುತ್ತಿದೆ. ರಾಮ ಮಂದಿರ ಉದ್ಘಾಟನೆ ಮರು ದಿನವೇ, ಭಕ್ತರ(Devotees) ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂದ್ರೆ, ಜನವರಿ 23 ರಿಂದ ರಾಮಲಲ್ಲಾನ(Ramlalla) ದರ್ಶನಕ್ಕೆ ಭಕ್ತರು ಬರೋದಕ್ಕೆ ಆರಂಭವಾಗಿದೆ. ಭಕ್ತರ ದರ್ಶನ ಆರಂಭವಾದ ಮೊದಲ ದಿನವೇ ಎರಡು ಲಕ್ಷಕ್ಕೂ ಹೆಚ್ಚಿನ ಭಕ್ತರು ದರ್ಶನಕ್ಕೆ ಬಂದಿದ್ದು. ಆರಂಭದ ದಿನದಿಂದ ಇಂದಿನವರೆಗೂ ಅದೇ ಸಂಖ್ಯೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಯೋಧ್ಯೆಗೆ(Ayodhya) ಬರುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ದಿನಕ್ಕೆ ಅದೆಷ್ಟೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಬರಲಿ. ಬಂದ ಎಲ್ಲ ಭಕ್ತರನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಯಾರಿಗೂ ಯಾವುದೇ ತೊಂದರೆಯಾಗದಂತೆ, ಯಾವುದೇ ಕಡಿಮೆಯಾಗದಂತೆ. ಮಕ್ಕಳಿಂದ ಮುದುಕರವರೆಗೂ ಎಲ್ಲರನ್ನೂ ಮೆಂಟೇನ್ ಮಾಡಿಕೊಂಡು, ಬಂದ ಎಲ್ಲ ಭಕ್ತರಿಗೂ ತಿಮ್ಮಪ್ಪನ ದರ್ಶನ ಸಿಗುವಂತೆ ನೋಡಿಕೊಳ್ಳುವುದರಲ್ಲಿ ಟಿಟಿಡಿ ಹೆಸರುವಾಸಿಯಾಗಿದೆ. ರಾಮನಿಗೆ ಸರ್ವ ಧರ್ಮಗಳ ಮೆಚ್ಚಿನ ದೇವರು. ಎಲ್ಲ ಧರ್ಮದವರು ಈಗ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಒಟ್ಟು 350 ಮುಸ್ಲಿ ಭಕ್ತರು 6 ದಿನಗಳ ಕಾಲ ಕಾಲ್ನಡಿಗೆಯಿಂದ ರಾಮನ ದರ್ಶನಕ್ಕೆ ಬಂದಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಕೆಲಸದಲ್ಲಿ ವಿಘ್ನ ಬರಲಿದ್ದು, ಗಣಪತಿ ಪ್ರಾರ್ಥನೆ ಮಾಡಿ..