ಅನುದಾನ ತಾರತಮ್ಯ ಸರಿಹೋಗದಿದ್ದರೆ ಪ್ರತ್ಯೇಕ ರಾಷ್ಟ್ರ ಕೊಡಿ: ಸಂಸದ ಡಿಕೆ ಸುರೇಶ್‌

ಅಭಿವೃದ್ಧಿಯ ಹಣದಲ್ಲಿ ನಮ್ಮ ರಾಜ್ಯದ ಪಾಲು ಸಿಗುತ್ತಿಲ್ಲ
ನಮ್ಮ ರಾಜ್ಯದ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದ್ದಾರೆ
ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ - ಡಿಕೆ ಸುರೇಶ್‌

Share this Video
  • FB
  • Linkdin
  • Whatsapp

ಸಂಸದ ಡಿ.ಕೆ.ಸುರೇಶ್‌ ಪ್ರತ್ಯೇಕ ರಾಷ್ಟ್ರದ(Separate Nation) ಕೂಗೆಬ್ಬಿಸಿದ್ದಾರೆ. ಅನುದಾನ ತಾರತಮ್ಯ ಸರಿಹೋಗದಿದ್ದರೆ ಪ್ರತ್ಯೇಕ ರಾಷ್ಟ್ರ ಕೊಡಿ ಎಂದಿದ್ದಾರೆ. ಅನುದಾನ(Grants) ತಾರತಮ್ಯ ಹೀಗೆ ಮುಂದುವರೆದ್ರೆ, ದಕ್ಷಿಣ ಭಾರತದವರು(South Indians) ಪ್ರತ್ಯೇಕ ರಾಷ್ಟ್ರದ ಧ್ವನಿ ಎತ್ತಬೇಕಾದದ್ದು ಅನಿವಾರ್ಯವಾಗಿದೆ. ನಮ್ಮ ರಾಜ್ಯದ ಪಾಲು ನಮಗೆ ಸಿಗುತ್ತಿಲ್ಲ. ನಮ್ಮ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದ್ದಾರೆ. ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ಹಿಂದಿ ಭಾಗದವರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ . ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಯಾವಾಗಲೂ ಅನ್ಯಾಯ ಆಗ್ತಿದೆ ಎಂದು ಸಂಸದ ಡಿಕೆ ಸುರೇಶ್‌ (DK Suresh) ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: MLA Balakrishna: ನಿಮ್ಮ ಮತ ಅಕ್ಷತೆಗಾ…? ಐದು ಗ್ಯಾರಂಟಿಗಾ..? ಕೈ ಶಾಸಕನ ಬಿಗ್ ಬಾಂಬ್..!

Related Video