Asianet Suvarna News Asianet Suvarna News

ಉತ್ತರದಲ್ಲಿ ಬೇಸರ..ದಕ್ಷಿಣದಲ್ಲಿ ಉತ್ಸಾಹ..! ತೆಲಂಗಾಣಕ್ಕೂ ನುಗ್ಗಿತಾ ಕರ್ನಾಟಕ ಗೆಲುವಿನ ಅಲೆ..?

ಕರ್ನಾಟಕದಲ್ಲಿ ಗೆಲ್ಲಿಸಿದ್ದವರೇ ಅಲ್ಲಿಯೂ ಸೂತ್ರಧಾರ..!
ತೆಲಂಗಾಣ ಗೆಲುವಲ್ಲಿ ಕರ್ನಾಟಕ ಕಾಂಗ್ರೆಸ್ ಪಾಲೆಷ್ಟು..?
ಕೆ.ಸಿ.ಆರ್. ಲೆಕ್ಕವನ್ನ ಬುಡಮೇಲು ಮಾಡಿದ ಕೈ ಸೇನೆ..!

ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ನಾಲ್ಕು ರಾಜ್ಯಗಳ ರಿಸಲ್ಟ್ ಬಂದಿದ್ದಾಗಿದೆ. ಬಿಜೆಪಿ ರಾಜಸ್ಥಾನ(Rajasthan), ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ(BJP) ಭರ್ಜರಿ ಗೆಲುವನ್ನ ಕಂಡಿದೆ. ಇತ್ತ ತೆಲಂಗಾಣದಲ್ಲಿ  ಕಾಂಗ್ರೆಸ್(Congress) ಕಮಾಲ್ ಮಾಡಿದೆ. ಕೈ ಪಕ್ಷಕ್ಕೆ ಉತ್ತರದ ನೋವಿಗೆ ದಕ್ಷಿಣದಲ್ಲಿ ಮುಲಾಮು ಸಿಕ್ಕಂತಾಗಿದೆ. ಮುಂಬರುವ ಲೋಕಸಭಾ(Loksabha) ಚುನಾವಣೆಯ ದಿಕ್ಸೂಚಿ ಅಂತಲೇ ಹೇಳಲಾಗೋ ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ನಾಲ್ಕು ರಾಜ್ಯಗಳ ರಿಸಲ್ಟ್ ಹೊರ ಬಿದ್ದಿದೆ. ಬಿಜೆಪಿ ಪಾಲಿಗೆ ಸೂಪರ್ ಸಂಡೆಯೇ ಸರಿ. ರಾಜಸ್ಥಾನ , ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕೇಸರಿ ಬಾವುಟ ಹಾರಿದೆ. ಈ ಮೂರು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿ ಭಾರಿ ಅಂತರದ ಗೆಲುವಿನೊಂದಿಗೆ ಕುಣಿತಾ ಇದೆ. ಆದ್ರೆ ಕಾಂಗ್ರೆಸ್ಸಿಗೆ ಈ ಮೂರು ರಾಜ್ಯಗಳ ಸೋಲನ್ನ ಸ್ವಲ್ಪ ಮರೆಸಿದ್ದು ಮಾತ್ರ ತೆಲಂಗಾಣ.ತೆಲಂಗಾಣದಲ್ಲಿ ಅಧಿಕಾರದಲ್ಲಿ ಇದ್ದ ಭಾರತ್ ರಾಷ್ಟ್ರ ಸಮಿತಿ ಪಕ್ಷವನ್ನ ಹಿಮ್ಮೆಟ್ಟಿಸಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಈ ಮೂಲಕ ಕೆ ಚಂದ್ರಶೇಖರ್ ರಾವ್(K Chandrasekhar Rao) ಅವರಿಗೆ ಅತಿ ದೊಡ್ಡ ಶಾಕ್ ಕೊಟ್ಟಿದೆ. ಚುನಾವಣಾ ಸಮೀಕ್ಷೆಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಪರವಾಗಿಯೇ ಹೆಚ್ಚು ಒಲವನ್ನ ತೋರಿಸಿದ್ದವು. ಕೊನೆಗೂ ಇಂದು ಘೋಷಣೆಯಾದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಒಂದು ರಾಜ್ಯ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. 9 ವರ್ಷಗಳ ಹಿಂದೆ ಆಂಧ್ರ ಪ್ರದೇಶದಿಂದ ತೆಲಂಗಾಣ ಪ್ರತ್ಯೇಕಗೊಂಡು ರಾಜ್ಯ ಅಂತ ಕರೆಸಿಕೊಂಡಿತ್ತು. ಭಾರತದ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಒಂದಾದ ತೆಲಂಗಾಣವನ್ನ ಸತತವಾಗಿ ಅಂದಿನ ಟಿ ಆರ್ ಎಸ್ ಅಥವಾ ಇಂದಿನ ಬಿ ಆರ್ ಎಸ್ ಆಡಳಿತ ಮಾಡಿಕೊಂಡು ಬಂದಿತ್ತು. ಕೆ ಚಂದ್ರಶೇಖರ್ ರಾವ್ ಸತತವಾಗಿ ಎರಡು ಅವಧಿ ಸಿಎಂ ಆಗಿದ್ದರು. ಆದರೆ ಈ ಬಾರಿಯ ಹ್ಯಾಟ್ರಿಕ್ ಸಿಎಂ ಕನಸಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿದೆ. ಸತತವಾಗಿ ಗೆದ್ದುಕೊಂಡುಬಂದ ಪಕ್ಷ ಏಕಾಏಕಿ ಸೋತು ಹೋಗುತ್ತೆ ಅಂದರೆ ಅಲ್ಲಿ ಸೋಲಿಗೆ ನೂರಾರು ಕಾರಣಗಳು ಸಿಗುತ್ತೆ. ಹಾಗೇ ಗೆದ್ದವರ ಬಳಿಯೂ ವಿನ್ನಿಂಗ್ ಸಿಕ್ರೇಟ್‌ಗಳು ಇರುತ್ತೆ.

ಇದನ್ನೂ ವೀಕ್ಷಿಸಿ:  2024ರ ಮಹಾಯುದ್ಧಕ್ಕೆ..ಮೋದಿಗೆ ಗ್ಯಾರಂಟಿ ಶಕ್ತಿ..!ಕುಗ್ಗಿಲ್ಲ ನಮೋ ಹವಾ..ದೇಶದಲ್ಲಿ ತಗ್ಗಿಲ್ಲ ಬಿಜೆಪಿ ಬಲ!