ಪಾಕ್ ಬತ್ತಳಿಕೆಗೆ ಬಂದಿವೆ ಚೀನಾ ಅಸ್ತ್ರಗಳು! ಅಗ್ನಿಪಂಜರದಲ್ಲಿ ಸಿಲುಕಿದೆಯಾ ಭಾರತ?

ಪಾಕಿಸ್ತಾನ ಚೀನಾದಿಂದ 40 ಫೈಟರ್ ಜೆಟ್‌ಗಳನ್ನು ಖರೀದಿಸುತ್ತಿದೆ ಮತ್ತು ಅತ್ಯಾಧುನಿಕ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೆಳವಣಿಗೆಗಳು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೂ ಆತಂಕಕಾರಿಯಾಗಿದೆ. ಪಾಕಿಸ್ತಾನದ ಬೆಳೆಯುತ್ತಿರುವ ಮಿಲಿಟರಿ ಶಕ್ತಿ ಮತ್ತು ಚೀನಾದ ಬೆಂಬಲವು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.27): ಈ ಪ್ರಶ್ನೆ ನಿಜಕ್ಕೂ ಭಯ ಹುಟ್ಟಿಸುತ್ತೆ. ಕಳೆದ ಆರೇಳು ತಿಂಗಳುಗಳಲ್ಲಿ ನಾವು ಊಹೆ ಕೂಡ ಮಾಡೋಕೆ ಸಾಧ್ಯವಾಗದ ಸಂಗತಿಗಳು ನಡೆದಿವೆ. ಆದರೆ, ಈಗ ಅದರ ಒಂದೊಂದೇ ಫಲಿತಾಂಶ ಆಚೆ ಬರ್ತಾ ಇದೆ.

ಅದರಲ್ಲೂ ಮುಖ್ಯವಾಗಿ, ಭಿಕಾರಿ ದೇಶ ಪಾಕಿಸ್ತಾನ, ಚೀನಾದಿಂದ ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 40 ಫೈಟರ್ ಜೆಟ್ ಖರೀದಿಸಲು ಮುಂದಾಗಿದೆ. ಅತ್ಯಾಧುನಿಕ ಮಿಸೈಲ್ ತಯಾರಿಸಿಕೊಂಡಿದೆ. ಅದೆಲ್ಲದರ ಹಿಂದೆ, ನೀಚ ಡ್ರ್ಯಾಗನ್ ಇದೆ ಅನ್ನೋ ಸಂಗತಿ ಈಗೇನು ಗುಟ್ಟಾಗಿ ಉಳಿದಿಲ್ಲ. ಆದರೆ, ಪಾಕಿಸ್ತಾನದ ಬಲ ಹೆಚ್ಚಾಗ್ತಾ ಇರೋದು, ಭಾರತದಲ್ಲಿ ಟೆನ್ಷನ್ ಹುಟ್ಟಿಸೋದಕ್ಕಿಂತಾ ಹೆಚ್ಚಾಗಿ, ಜಗತ್ತಿಗೇ ಶಾಪವಾಗಿ ಕಾಡೋ ಭೀತಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Allu Arjun Vs Revanth Reddy: 50 ಪ್ರಶ್ನೆಗಳಲ್ಲಿ 20ಕ್ಕೆ ಉತ್ತರ,30ಕ್ಕೆ ತೆಪ್ಪಗಿದ್ದ ಪುಷ್ಪ!

ಪಾಕಿಸ್ತಾನ ಮಿಸೈಲ್ ರೆಡಿ ಮಾಡ್ಕೊಳ್ತಾ ಇದೆ. ಅಫ್ಘಾನಿಸ್ತಾನ ಮೇಲೆ ದರ್ಪ ದೌಲತ್ತು ತೋರಿಸ್ತಾ ಇದೆ. ಅದಕ್ಕೆ ಚೀನಾ ಬೆನ್ನು ಸವರುತ್ತಿದೆ. ಈ ಸಂಗತಿಯೇ ಒಂದು ಟೆನ್ಷನ್ ಹುಟ್ಟಿಸಿದ್ರೆ, ಬಾಂಗ್ಲಾದಲ್ಲಾಗಿರೋ ಇನ್ನೊಂದು ಘಟನೆ, ಭಾರತವನ್ನ ಅಗ್ನಿಪಂಜರದ ಮಧ್ಯೆ ಇಟ್ಟಂತಾಗಿದೆ.

Related Video