Asianet Suvarna News Asianet Suvarna News

ಮಕ್ಕಳ ಕ್ರಿಕೆಟ್ ಆಟ..2 ಸಮುದಾಯಗಳ ಕಾದಾಟ! 8 ಜನರಿಗೆ ಗಾಯ, ನಡು ರಸ್ತೆಯಲ್ಲೇ ತಲ್ವಾರ್ ಪ್ರದರ್ಶನ!

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮಕ್ಕಳ ನಡುವೆ ಕ್ರಿಕೆಟ್ ಗಲಾಟೆ
ಮಕ್ಕಳ ಗಲಾಟೆ ಮಧ್ಯೆ ಪ್ರವೇಸಿದ ಎರಡೂ ಗುಂಪಿನ ಯುವಕರು
ಬೆಳಗಾವಿಯಲ್ಲಿ ಹೈ ಅಲರ್ಟ್ ಘೋಷಿಸಿದ ಪೊಲೀಸ್ ಆಯುಕ್ತರು
 

ಮಕ್ಕಳ ಕ್ರಿಕೆಟ್ ಆಟದಿಂದ ಎರಡು ಸಮುದಾಯಗಳ(Two communities) ನಡುವೆ ಕಾದಾಟ(Conflict) ನಡೆದಿರುವ ಘಟನೆ ಬೆಳಗಾವಿ(Belagavi) ನಗರದ ಅಳ್ವಾನ್ ಗಲ್ಲಿಯಲ್ಲಿ( Alwana Galli) ನಡೆದಿದೆ. ಮನೆಗಳ ಮೇಲೆ ಕಲ್ಲು ತೂರಿ(Stone pelting)ತಲ್ವಾರ್ ಪ್ರದರ್ಶನ ಮಾಡಲಾಗಿದೆ. ಅಬ್ದುಲ್ ಎಂಬಾತನಿಂದ ನಡು ರಸ್ತೆಯಲ್ಲಿ ತಲ್ವಾರ್ ಪ್ರದರ್ಶನ ಮಾಡಲಾಗಿದ್ದು, ಶಹಾಪುರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಅಳ್ವಾನ್ ಗಲ್ಲಿ ಇದೆ. ಎರಡೂ ಗುಂಪಿನ ಗಾಯಾಳುಗಳು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 3 KSRP, 3 ಸಿಪಿಐ ನಿಯೋಜನೆ ಮಾಡಲಾಗಿದೆ. ಶಹಾಪುರ ಪೊಲೀಸ್ ಠಾಣೆಗೆ ರಾತ್ರಿಯೇ ಆಯುಕ್ತರು ಭೇಟಿ ನೀಡಿದ್ದಾರೆ. ಬೆಳಗಾವಿ ನಗರದಲ್ಲಿ ಹೈ ಅಲರ್ಟ್‌ನನ್ನು ಪೊಲೀಸ್ ಆಯುಕ್ತರು ಘೋಷಿಸಿದ್ದು, ಬೆಳಗಾವಿ ನಗರದಾದ್ಯಂತ ಪೊಲೀಸ್ ರೌಂಡ್ಸ್, ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲಾಗಿದೆ.

ಇದನ್ನೂ ವೀಕ್ಷಿಸಿ:  ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು: ತಮ್ಮ ಪ್ರೇಮಾಂಕುರದ ಕಹಾನಿ ಬಿಚ್ಚಿಟ್ಟ ಸಿದ್ದರಾಮಯ್ಯ

Video Top Stories