ಕಾಶ್ಮೀರ ಭಾರತದ ಭಾಗವಲ್ಲ ಎನ್ನುತ್ತಿದ್ದ ಜಾರ್ಜ್ ಸೊರೊಸ್ ಜೊತೆ ಸೋನಿಯಾ ಆತ್ಮೀಯತೆ?

ಬಿಜೆಪಿ ಜಾರ್ಜ್ ಸೊರೊಸ್‌ಗೆ ಸೋನಿಯಾ ಗಾಂಧಿ ಜೊತೆ ಸಂಪರ್ಕ ಇದ್ದ ಬಗ್ಗೆ ಆರೋಪ ಮಾಡಿದ್ದು, ಸಂಸತ್ತಿನಲ್ಲಿ ಗಲಾಟೆಗೆ ಕಾರಣವಾಗಿದೆ. ಸೊರೊಸ್‌ಗೆ ಸಂಬಂಧಿಸಿದ ಸಂಸ್ಥೆಯ ಅಧ್ಯಕ್ಷರಾಗಿ ಸೋನಿಯಾ ಇದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

First Published Dec 11, 2024, 3:51 PM IST | Last Updated Dec 11, 2024, 4:44 PM IST

ಕಾಂಗ್ರೆಸ್‌ನ ಅದಾನಿ ಆರೋಪಕ್ಕೆ ಬಿಜೆಪಿ ಜಾರ್ಜ್ ಸೊರೊಸ್ ಅವರ ಹೆಸರು ತೆಗೆದು ಪ್ರತ್ಯಾರೋಪ ಮಾಡಿದ್ದು, ಸಂಸತ್‌ನಲ್ಲಿ ಭಾರಿ ಗಲಾಟೆ ನಡೆಯುತ್ತಿದೆ. ಜಾರ್ಜ್​ ಸೋರೋಸ್ ಹಣ ಕಂಪನಿಗೆ ಸೋನಿಯಾ ಕೂಡ ಸಹ ಅಧ್ಯಕ್ಷೆ ಆಗಿದ್ದಾರಾ? ಈ ಬಗ್ಗೆ ಬಿಜೆಪಿ ದಾಖಲೆ ಸಮೇತ ಗಂಭೀರ ಆರೋಪ ಮಾಡಿದೆ. ಇದರಿಂದ ಸಂಸತ್​ನಲ್ಲಿ ಭಾರಿ ಗಲಾಟೆ ನಡೆದಿದೆ. ಜಾರ್ಜ್ ಸೊರೊಸ್ ಹಣ ನೀಡುವ ಪೋರಂ ಆಫ್ ಡಿ ಡೆಮಾಕ್ರೆಟಿಕ್​ ಲೀಡರ್ಸ್​ ಇನ್ ಏಷ್ಯಾ ಫೆಸಿಫಿಕ್(ಎಫ್​ಡಿಎ- ಎಪಿ) ಸಂಸ್ಥೆಗೆ ಸೋನಿಯಾ ಸಹ ಅಧ್ಯಕ್ಷೆಯಾಗಿದ್ದಾರೆ. ಕಾಶ್ಮೀರ ಭಾರತದ ಭಾಗವಲ್ಲ ಎಂಬುದು ಫೋರಮ್ ಆಫ್ ಡೆಮಾಕ್ರೆಟಿಕ್ ಲೀಡರ್ಸ್ ನಿಲುವಾಗಿದೆ. ಕಾಶ್ಮೀರವನ್ನೂ ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸಬೇಕು ಎಂಬ ನಿಲುವು ಎಫ್​ಡಿಎ-ಎಪಿ ಸಂಸ್ಥೆಯದ್ದು, ಹೀಗಾಗಿ ಜಾರ್ಜ್ ಸೋರೋಸ್​ ಹಾಗೂ ಕಾಂಗ್ರೆಸ್​ ನಡುವಿನ ಸಂಪರ್ಕ ಚರ್ಚೆಗೆ ಎನ್​ಡಿಎ ಪಟ್ಟು ಹಿಡಿದಿದೆ. ಕಾಂಗ್ರೆಸ್​ ನಾಯಕರ ಅದಾನಿ ಪ್ರತಿಭಟನೆಗೆ ಎನ್​ಡಿಎ ಮೈತ್ರಿ ಈ ಮೂಲಕ ತಿರುಗೇಟು ನೀಡಿದೆ. 

Video Top Stories