Turning point: ಸಂಧಾನ ಫಲಿಸಲಿಲ್ಲ..ಸಂಘರ್ಷ ತಪ್ಪಲಿಲ್ಲ..ದೇಶವನ್ನೇ ಸುಡಲು ಹಬ್ಬಿತ್ತು ಪ್ರತೀಕಾರದ ಕಿಚ್ಚು!
ಗುಂಡಿನ ಮಳೆ..ರಕ್ತದ ಹೊಳೆ.. ಅಲ್ಲಿ ಆಗಿದ್ದೇನು..?
ದೇಶದ ನೆಮ್ಮದಿಗೆ ಕೊಳ್ಳಿ ಇಟ್ಟ ಪ್ರತೀಕಾರದ ಕಾಳ್ಗಿಚ್ಚು!
ಪ್ರಧಾನಿ ಇಂದಿರೆಯನ್ನ ನಂಬಿದ್ದವರೇ ಕೊಂದ ಕತೆ..!
ಪಂಜಾಬಿನಿಂದ ಖಲಿಸ್ತಾನಿಗಳ ಬೆದರಿಕೆ ಶುರುವಾಯ್ತು.. ಹಾಗಾಗಿನೆ, ಪಂಜಾಬಿಂದ(Punjab) ದೆಹಲಿಗೆ ಬರೋ ಪ್ರತಿ ವಾಹನವನ್ನೂ, ವ್ಯಕ್ತಿಯನ್ನೂ ತಪಾಸಣೆ ಮಾಡೋ ವ್ಯವಸ್ಥೆ ಮಾಡಿದ್ರು.. ಆದ್ರೆ ಈ ಘಟನೆ, ಸಿಖ್ಖರನ್ನೇ ಕೆರಳಿಸಿಬಿಡ್ತು.ಅವತ್ತು ಬಾಂಗ್ಲಾ ವಿಮೋಚನ ಯುದ್ಧ(Bangladesh Liberation War) ನಡೆದಾಗ, ಪಾಕಿಸ್ತಾನದ( Pakistan) ಸೇನೆನಾ ಬಗ್ಗುಬಡಿದಿದ್ರರಲ್ಲಿ ದೊಡ್ಡ ಹೆಸರು ಮಾಡಿದ್ದವರು, ಏರ್ ಮಾರ್ಷಲ್ ಅರ್ಜುನ್ ಸಿಂಗ್.. ಆದರೆ ಅವರನ್ನೂ ಕೂಡ ಅನುಮಾನದ ದೃಷ್ಟಿಯಿಂದ ನೋಡೋ ಹಾಗಾಯ್ತು.. ನೂರಾರು ಮಂದಿ ಸಿಖ್ಖರನ್ನ, ಅನುಮಾನದ ಮೇರೆಗೆ ಬಂಧಿಸಲಾಯ್ತು.. ಪಂಜಾಬ್ನಲ್ಲಿ ಆಕ್ರೋಶದ ಲಾವಾರಸ ಆಸ್ಫೋಟಗೊಳ್ಳೋಕೆ ಶುರುವಾಯ್ತು.. ಪಂಜಾಬಿನಲ್ಲಿ ಶುರುವಾದ ಈ ಆಕ್ರೋಶದ ಕಿಚ್ಚಲ್ಲಿ, ಕೈಬೆಚ್ಚಗೆ ಮಾಡ್ಕೊಳೋಕೆ ಪ್ಲಾನ್ ಮಾಡ್ದ, ಭಿಂದ್ರನ್‌ವಾಲೆ(Bhindranwale). ನಮ್ಮ ನೆಲದಲ್ಲಿ ನಮ್ಮನ್ನೇ ಸೆಕಂಡ್ ಕ್ಲಾಸ್ ಸಿಟಿಜನ್ ಥರ ಟ್ರೀಟ್ ಮಾಡ್ತಾ ಇದಾರೆ.. ಪ್ರಾಣ ಪಣಕ್ಕಿಟ್ಟು ಸೇವೆ ಮಾಡೋ ಸಿಖ್ ಸೈನಿಕರನ್ನೇ ಅವಮಾನಿಸ್ತಾ ಇದಾರೆ ಅಂತ ಯುವಕರನ್ನ ಪ್ರಚೋದಿಸೋಕೆ ಶುರುಮಾಡ್ದ.. ಅವನ ಹಿಂದಿದ್ದ ಸೇನೆ ಅಲರ್ಟ್ ಆಯ್ತು.. ಪರಿಣಾಮ-ರಕ್ತದೋಕುಳಿ ಶುರುವಾಯ್ತು. ಅದಕ್ಕೆ ಮೊದಲ ಬಲಿಯಾಗಿದ್ದು, ಅಂದಿನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್, ಅವತಾರ್ ಸಿಂಗ್ ಅಟ್ವಾಲ್.
ಇದನ್ನೂ ವೀಕ್ಷಿಸಿ: ಉಗ್ರರಿಗೆ ಪಾಕಿಸ್ತಾನವೇ ಕೋಟೆ..ಭಾರತಕ್ಕೆ ತಪ್ಪದು ಬೇಟೆ: ದೇಶದ ವಿರುದ್ಧವೇ ಸ್ಕೆಚ್ ಹಾಕಿದ್ದವರು ಖಲ್ಲಾಸ್ !