ಕಾಂಗ್ರೆಸ್ ಕಡೆಗಣಿಸಿದವರಿಗೆ ಸನ್ಮಾನ ಮಾಡಿತಾ ಕಮಲಪಡೆ..? ಎದುರಾಳಿಗಳಿಗೆ ಮೋದಿ ರವಾನಿಸಿದ ಸಂದೇಶವೇನು..?

ಲೋಕಸಮರದ ಹೊತ್ತಲ್ಲಿ ಮೋದಿ ಹೆಣೆದರಾ ರತ್ನ ರಣತಂತ್ರ..?
ರತ್ನ ಪ್ರಶಸ್ತಿ ಕೊಟ್ಟು ಎದುರಾಳಿಗಳನ್ನ ಕಟ್ಟಿ ಹಾಕಿದ್ರಾ ಮೋದಿ..?
ಒಂದೇ ವರ್ಷದಲ್ಲಿ ಐವರಿಗೆ  ಭಾರತ ರತ್ನ,ಏನಿದರ ಒಳಮರ್ಮ..?

First Published Feb 10, 2024, 5:29 PM IST | Last Updated Feb 10, 2024, 5:30 PM IST

ಇಡೀ ದೇಶವೇ ಲೋಕಸಭಾ ಮಹಾಸಮರಕ್ಕೆ ಸಾಕ್ಷಿಯಾಗೋ ಸಮಯ ಸನ್ನಿಹಿತವಾಗ್ತಾ ಇದೆ.ರಾಜಕೀಯ ಪಕ್ಷಗಳು, ಗೆದ್ದೇ ಗೆಲ್ಲುವ ಸಲುವಾಗಿ, ನಾನಾ ವಿಧ ಪ್ರಯೋಗಗಳಿಗೆ ಮುಂದಾಗಿದ್ದಾವೆ. ಕೆಲವೇ ಕೆಲವು ವಾರಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು, ಭಾರತ ರತ್ನ ಪ್ರಶಸ್(Bharat Ratna Award)ತಿ ಘೋಷಿಸಿದ್ರು. ಅದೂ ಕೂಡ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜವಾದಿ ಆಂದೋಲನಕ್ಕೆ ಅನನ್ಯ ಕೊಡುಗೆ ನೀಡಿದ್ದ, ಬಿಹಾರ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ. ಅದರ ಬೆನ್ನಲ್ಲೇ, ರಾಷ್ಟ್ರ ರಾಜಕಾರಣದ ಭೀಷ್ಮ ಅಂತ ಕರೆಸಿಕೊಳ್ಳೋ, ಬಿಜೆಪಿಯ(BJP) ವಿರಿಷ್ಠ ನಾಯಕ, ಲಾಲ್ ಕೃಷ್ಣ ಅಡ್ವಾಣಿ ಅವರಿಗೂ ಭಾರತ ರತ್ನ ಘೋಷಿಸಿದ್ರು. ಇನ್ನೂ ಆ ರತ್ನ ಪ್ರಶಸ್ತಿ ಘೋಷಿಸಿ, ವಾರವಾದರೂ ಕಳೆದಿದ್ಯೋ ಇಲ್ವೋ, ಅಷ್ಟ್ರಲ್ಲೇ ಮತ್ತೆ ಮೂವರಿಗೆ ಕೇಂದ್ರದಲ್ಲಿರೋ ಮೋದಿ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ.

ಇದನ್ನೂ ವೀಕ್ಷಿಸಿ:  ಉಪ್ಪಿನಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ: ಚಲಿಸುತ್ತಿದ್ದ ಬಸ್‌ನಿಂದ ಹೊರಕ್ಕೆ ಬಿದ್ದು ಮಹಿಳೆ ಸಾವು