ಉಪ್ಪಿನಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ: ಚಲಿಸುತ್ತಿದ್ದ ಬಸ್‌ನಿಂದ ಹೊರಕ್ಕೆ ಬಿದ್ದು ಮಹಿಳೆ ಸಾವು

ಬಸ್‌ನಿಂದ ಹೊರಕ್ಕೆ ಬಿದ್ದು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಂಗಳೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
 

First Published Feb 10, 2024, 1:05 PM IST | Last Updated Feb 10, 2024, 1:08 PM IST

ಉಪ್ಪಿನಂಗಡಿ ಬಳಿಯ ಮಾಣಿ ಎಂಬಲ್ಲಿ ಬಸ್‌ನಿಂದ(Bus) ಹೊರಕ್ಕೆ ಬಿದ್ದು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಜ.31ರಂದು ನಡೆದಿದೆ. ಈ ಸಂಬಂಧ ಚಾಲಕ, ನಿರ್ವಾಹಕರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ(Uppinangadi) ನಿನ್ನಿಕಲ್ಲು ನಿವಾಸಿ ರಾಧಾ(66) ಮೃತ ದುರ್ದೈವಿಯಾಗಿದ್ದಾರೆ. ಬಸ್‌ನಲ್ಲಿ ಮಗು ಹಿಡಿದಿದ್ದ ಮಹಿಳೆಗೆ(Woman) ಸೀಟು ಬಿಟ್ಟುಕೊಡುವ ವೇಳೆ ಆಯತಪ್ಪಿ ಹೊರಕ್ಕೆ ಬಿದ್ದಿದ್ದರಿಂದ ಈ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂಡು ಮಂಗಳೂರಿನ(Mangalore) ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ನಾವು ಇವತ್ತಲ್ಲ ನಾಳೆ ಸಾಯಲೇಬೇಕು, ಹೀಗಾಗಿ ಸಂಘರ್ಷಕ್ಕೆ ತಯಾರಾಗಿ : ಅಬ್ದುಲ್ ಮಜೀದ್ ಮೈಸೂರು

Video Top Stories