Asianet Suvarna News Asianet Suvarna News

ದೆಹಲಿಯಲ್ಲಿ ವಾಯುಮಾಲಿನ್ಯ: ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮವೇನು ?

ನವೆಂಬರ್ 1ರಿಂದ ಡೀಸೆಲ್ ಬಸ್‌ಗಳಿಗೆ ನಿರ್ಬಂಧ 
ಎಲೆಕ್ಟ್ರಿಕ್ ಬಸ್, ಸಿಎನ್‌ಜಿ ಬಸ್ಗೆ ಮಾತ್ರ ಪ್ರವೇಶ
ಕಲ್ಲಿದ್ದಲು, ಸ್ಟೌ, ಮರದ ಒಲೆಗಳಿಗೆ ನಿರ್ಬಂಧ
 

ದೀಪಾವಳಿಗೆ ಇನ್ನೂ ಎರಡು ವಾರ ಇರುವಾಗಲೇ, ನವದೆಹಲಿಯಲ್ಲಿ ವಾಯುಮಾಲಿನ್ಯ(air pollution) ಶುರುವಾಗಿದೆ. ವಾಯುಗುಣಮಟ್ಟ ಅತ್ಯಂತ ಕಳಪೆಯಾಗಿದೆ.ಇಲ್ಲಿ ನವೆಂಬರ್‌ನಿಂದ ಫೆಬ್ರವರಿವರೆಗೆ ವಾಯು ಗುಣಮಟ್ಟ ಕುಸಿತವಾಗಲಿದೆ. ಈ ಸಲ ಅಕ್ಟೋಬರ್‌ನಲ್ಲೇ ತೀವ್ರ ವಾಯುಮಾಲಿನ್ಯವಾಗಿದೆ. ಜನರ ಆರೋಗ್ಯದ(Health) ಮೇಲೂ ಗಂಭೀರ ಪರಿಣಾಮಬೀರಲಿದೆ. ಸೋಮವಾರ ಬೆಳಗ್ಗೆ 303 AQI ದಾಖಲಾಗಿದೆ. ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆಯಿದ್ದು, ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ(delhi) ಸರ್ಕಾರ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದೆ. ಧೀರ್‌ಪುರ - 352 AQI, ದೆಹಲಿ ವಿಶ್ವವಿದ್ಯಾಲಯ - 330 AQI, ನೋಯ್ಡಾ - 308 AQI, ಲೋಧಿ ರಸ್ತೆ - 303 AQI, ಏರ್‌ಪೋರ್ಟ್ - 323 AQI, IIT ದೆಹಲಿ - 309 AQI ವಾಯುಮಾಲಿನ್ಯವಿದೆ.

ಇದನ್ನೂ ವೀಕ್ಷಿಸಿ:  ದಸರಾ ಬಳಿಕ ಘೋಷಣೆಯಾಗುತ್ತಾ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು? ಈ ಮಹಿಳಾ ನಾಯಕಿಗೆ ಸಾರಥ್ಯದ ಹೊಣೆ?

Video Top Stories