ದಸರಾ ಬಳಿಕ ಘೋಷಣೆಯಾಗುತ್ತಾ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು? ಈ ಮಹಿಳಾ ನಾಯಕಿಗೆ ಸಾರಥ್ಯದ ಹೊಣೆ?

ಶೋಭಾ ಆಯ್ಕೆ ಬಗ್ಗೆ ಬಿಜೆಪಿಯಲ್ಲಿ ಹಲವು ಪ್ರಶ್ನೆಗಳು
ಶೋಭಾ ಆಯ್ಕೆಯಾದರೆ ಬಿಜೆಪಿಗೆ ಪ್ಲಸ್ಸೋ,ಮೈನಸ್ಸೋ 
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಶೋಭಾ ಆಯ್ಕೆ ಏಕೆ..?

Share this Video
  • FB
  • Linkdin
  • Whatsapp

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ (Shobha Karandlaje) ಬಿಜೆಪಿ ರಾಜ್ಯಾಧ್ಯಕ್ಷ (BJP state president) ಸ್ಥಾನ ಸಿಗಲಿದೆ ಎನ್ನಲಾಗಿದೆ. ಈ ಸಂಬಂಧ ಕರಂದ್ಲಾಜೆ ಆಯ್ಕೆಗೆ ಬಿಜೆಪಿ ಹೈಕಮಾಂಡ್‌ನಿಂದ ಒಪ್ಪಿಗೆ ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಬಿಜೆಪಿ(BJP) ಹೈಕಮಾಂಡ್ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಶೋಭಾ ಆಯ್ಕೆಗೆ ರಾಜ್ಯದ 2 ಬಣಗಳ ನಾಯಕರಿಂದಲೂ ಒಪ್ಪಿಗೆ ಎನ್ನುವ ವಿಷಯವೂ ಬಹಿರಂಗ ಆಗಿದೆಯಂತೆ. ಈ ಮೂಲಕ ಮೊದಲ ಬಾರಿಗೆ ಎಲ್ಲಾ ನಾಯಕರಿಂದಲೂ ಒಮ್ಮತದ ಅಭಿಪ್ರಾಯ ಪಡೆದ ನಾಯಕಿ ಆಗಲಿದ್ದಾರೆ. ಇದರೊಂದಿಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷೆಯಲ್ಲಿದ್ದ ಉಳಿದ ನಾಯಕರಿಗೆ ಶಾಕ್ ಆಗಿದೆ. ಒಟ್ಟಾರೆ ಶೀಘ್ರದಲ್ಲೇ ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷ ಹುದ್ದೆ ಏರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 

ಇದನ್ನೂ ವೀಕ್ಷಿಸಿ: ಇಸ್ರೇಲ್ ಹಮಾಸ್ ಯುದ್ಧ: ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಭೀಕರ ಕೃತ್ಯಗಳ ದೃಶ್ಯ ಪ್ರದರ್ಶನ

Related Video