ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟನೆ: ಮಕ್ಕಳ ಜೊತೆ ಪ್ರಧಾನಿ ಮೋದಿ ಮಾತುಕತೆ
6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ಅಯೋಧ್ಯೆ ಸಂಪರ್ಕಿಸುವ 2 ಅಮೃತ ಭಾರತ ರೈಲುಗಳು
ಟೌನ್ ಶಿಪ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕು ಸ್ಥಾಪನೆ
ಇಂದು ಅಯೋಧ್ಯೆಯಲ್ಲಿ ಹಲವು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಚಾಲನೆ ನೀಡಿದ್ರು. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ರು. ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನೂ(Ayodhya Dham Junction railway station) ಉದ್ಘಾಟನೆ ಮಾಡಲಾಯಿತು. 2 ಅಮೃತ್ ಭಾರತ್ ಎಕ್ಸ್‌ಪ್ರೆಸ್, 6 ವಂದೇ ಭಾರತ್‌ಗೆ ಚಾಲನೆ ನೀಡಿದ್ರು. ಸುಮಾರು 2180 ಕೋಟಿ ವೆಚ್ಚದ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. 1450 ಕೋಟಿ ವೆಚ್ಚದಲ್ಲಿ ಅಯೋಧ್ಯೆ(Ayodhya) ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. 240 ಕೋಟಿ ರೂ. ವೆಚ್ಚದ ಅಯೋಧ್ಯಾ ಧಾಮ ರೈಲು ನಿಲ್ದಾಣ. ಇಲ್ಲಿ ಹಲವು ಸೌಲಭ್ಯಗಳು ಇವೆ. ಮಕ್ಕಳಿಗೆಂದು ಹಲವು ಕೊಠಡಿಗಳು ಇಲ್ಲಿ ಇವೆ. ಬಳಿಕ ಅಲ್ಲಿರುವ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಇದನ್ನೂ ವೀಕ್ಷಿಸಿ: Narendra Modi in Ayodhya: ಅಯೋಧ್ಯೆಯಲ್ಲಿ ಪ್ರಧಾನಿ ರೋಡ್ ಶೋ : ಮೋದಿ ಸಾಗೋ ರಸ್ತೆಯುದ್ಧಕ್ಕೂ ಜನವೋ ಜನ..!