Asianet Suvarna News Asianet Suvarna News

ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ನಡೆಯುತ್ತಾ ಚುನಾವಣೆ ?: 5 ವರ್ಷದಿಂದ ಚುನಾಯಿತ ಸರ್ಕಾರವೇ ಇರಲಿಲ್ಲ..!

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ.
 

ಜಮ್ಮು ಕಾಶ್ಮೀರದಲ್ಲಿ ಈ ವರ್ಷವೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾಯಿತ ಸರ್ಕಾರವಿಲ್ಲದೇ ಐದು ವರ್ಷ ಕಳೆದು ಹೋಗಿದೆ. 2014ರ ಬಳಿಕ ಇಲ್ಲಿ ವಿಧಾನಸಭಾ ಚುನಾವಣೆಯೇ(Assembly election) ನಡೆದಿಲ್ಲ. ಈ ಬಾರಿ ಚುನಾವಣೆ ನಡೆಸಲು ಬಿಜೆಪಿ(BJP) ಉತ್ಸುಕವಾಗಿದೆ. ಇದರ ಜೊತೆಗೆ ಜಮ್ಮು-ಕಾಶ್ಮೀರ(Jammu and Kashmir) ಮೀಸಲಾತಿ ಮಸೂದೆ ತಿದ್ದುಪಡಿಗೂ ಚಿಂತನೆ ನಡೆಸಲಾಗಿದೆ. ಇನ್ನೂ ವಿಧಾನಸಭಾ ಸ್ಥಾನಗಳು 107 ರಿಂದ 114ಕ್ಕೆ ಹೆಚ್ಚಳವಾಗಿವೆ. ಮೀಸಲಾತಿಯಲ್ಲಿ ಎರಡು ಸ್ಥಾನ ಕಾಶ್ಮೀರಿ ಪಂಡಿತರಿಗೆ ಮೀಸಲಿಡಲು ಚಿಂತನೆ ನಡೆಸಲಾಗಿದೆ. ಇನ್ನೊಂದು ಸ್ಥಾನ ಪಿಒಕೆಯಿಂದ ವಲಸೆ ಬಂದವರಿಗೆ ಮೀಸಲಿಡಲಾಗುವುದು. ಈ ಮೂಲಕ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಪ್ಲ್ಯಾನ್‌ ಮಾಡಿದೆ. 

ಇದನ್ನೂ ವೀಕ್ಷಿಸಿ:  ಸೋಲಿನಿಂದ ಪುಟಿದೇಳಲು ಸಿದ್ಧವಾಯ್ತ ದಳ-ಕಮಲ..?: ಇಂದು ದೇವೇಗೌಡರ ಮಹತ್ವದ ಸುದ್ದಿಗೋಷ್ಠಿ..!

Video Top Stories