
ಸೋಲಿನಿಂದ ಪುಟಿದೇಳಲು ಸಿದ್ಧವಾಯ್ತ ದಳ-ಕಮಲ..?: ಇಂದು ದೇವೇಗೌಡರ ಮಹತ್ವದ ಸುದ್ದಿಗೋಷ್ಠಿ..!
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ಹಿನ್ನೆಲೆ ಇದರಿಂದ ಎಚ್ಚೆತ್ತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಸೋಲಿನಿಂದ ಪುಟಿದೇಳಲು ಬಿಜೆಪಿ(BJP) ಮತ್ತು ಜೆಡಿಎಸ್(JDS) ಸಿದ್ಧವಾಗುತ್ತಿವೆಯಾ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. ರಾಜ್ಯ ಕಾಂಗ್ರೆಸ್(Congress) ವಿರುದ್ಧ ಹೋರಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿ ಹೋರಾಟ ನಡೆಸಲಿವೆ ಎನ್ನಲಾಗ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಗೂ(Loksabha Election) ಮುನ್ನ ಕಮಲ-ದಳ ಮೈತ್ರಿ ಪಕ್ಕನಾ ಎಂಬ ಅನುಮಾನ ಶುರುವಾಗಿದೆ. ಮೈತ್ರಿ ವದಂತಿ ಬೆನ್ನಲ್ಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು(H.D. Devegowda) ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಮೈತ್ರಿ ವದಂತಿಗೆ ಹೆಚ್‌ಡಿಡಿ ತೆರೆ ಎಳೆಯುತ್ತಾರಾ ಎಂಬುದನ್ನು ನೋಡಬೇಕಿದೆ. ಶುಕ್ರವಾರ ತಮ್ಮ ಪಕ್ಷದ ಶಾಸಕರ ಜೊತೆ ದೊಡ್ಡ ಗೌಡರು ಸಭೆಯನ್ನು ನಡೆಸಿದ್ದರು.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಎಲ್ಲಾ ಬೆಳಗ್ಗೆ ಕೆಲಸಕ್ಕೆ ಹೋದ್ರೆ, ಇವ್ರು ಹೋಗೋದು ಮಾತ್ರ ಕಳ್ಳತನಕ್ಕೆ..ಇಲ್ಲೊಂದು ಕಳ್ಳರ ಕುಟುಂಬ..!