
Interview: ಅಗ್ನಿಪಥ್ ಸ್ಕೀಂ ಹಾಗೂ ರಾಹುಲ್ ಇಡಿ ಕೇಸ್: ಬಹಳಷ್ಟು ವಿಚಾರ ಮಾತನಾಡಿದ ಓಂ ಬಿರ್ಲಾ
2022ರ ಮುಂಗಾರು ಅಧಿವೇಶನಕ್ಕೆ ಸಿದ್ಧತೆಯೂ ಆರಂಭವಾಗಿದೆ. ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಸಂಬಂಧಿಸಿದಂತೆ ಈ ಬಾರಿಯ ಮುಂಗಾರು ಅಧಿವೇಶನವು ಅತ್ಯಂತ ಮಹತ್ವದ್ದಾಗಿದೆ. ಇದೇ ವೇಳೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ಈ ಅಧಿವೇಶನದಲ್ಲಿ ನಡೆಯಲಿದೆ. ಲೋಕಸಭೆಯ ಕಾರ್ಯ ವ್ಯವಸ್ಥೆ, ಮೂರು ವರ್ಷಗಳ ಸಾಧನೆಗಳ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಏಷ್ಯಾನೆಟ್ ನ್ಯೂಸ್ ವಿವರವಾಗಿ ಚರ್ಚಿಸಿದೆ.
ನವದೆಹಲಿ(ಜೂ.21): 17ನೇ ಲೋಕಸಭೆ ಮೂರು ವರ್ಷ ಪೂರೈಸಲಿದೆ. ಈ ಬಾರಿಯ ಲೋಕಸಭೆ ಹಲವು ರೀತಿಯಲ್ಲಿ ವಿಶೇಷವಾಗಿದೆ. ಈ ಮೂರು ವರ್ಷಗಳಲ್ಲಿ ಎಲ್ಲಾ ಬಿಲ್ ಅಥವಾ ಮಸೂದೆಗಳು ಅಂಗೀಕರಿಸಲ್ಪಟ್ಟವು. ಹಲವರು ಸದನದಲ್ಲಿ ಗದ್ದಲ ನಡೆಸಿದ್ದಾರೆ. ಹೀಗಿರುವಾಗಲೇ 2022ರ ಮುಂಗಾರು ಅಧಿವೇಶನದ ತಯಾರಿಯೂ ಆರಂಭವಾಗಿದೆ ಎಂಬುವುದು ಉಲ್ಲೇಲೇಖನೀಯ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇನ್ನು ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಸಂಬಂಧಿಸಿದಂತೆ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಸಾಕಷ್ಟು ಗದ್ದಲ ಉಂಟಾಗಬಹುದು. ಈ ಅಧಿವೇಶನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆಯಬೇಕಿದೆ. ಲೋಕಸಭೆಯ ಕಾರ್ಯವೈಖರಿ, ಮೂರು ವರ್ಷಗಳ ಸಾಧನೆಗಳ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಏಷ್ಯಾನೆಟ್ ನ್ಯೂಸ್ ಬಹಳ ವಿವರವಾಗಿ ಚರ್ಚಿಸಿದೆ. ಸಂಭಾಷಣೆಯ ಮುಖ್ಯಾಂಶಗಳು ಇಲ್ಲಿವೆ.