
Watch Video: ದೆಹಲಿ 'ಎಣ್ಣೆ' ಹಗರಣ..ಅರವಿಂದ್ ಕೇಜ್ರಿವಾಲ್ ಅರೆಸ್ಟ್: ಇ-ಫೈಲಿಂಗ್ ಮೂಲಕ ಸುಪ್ರೀಂಕೋರ್ಟ್‌ಗೆ ಅರ್ಜಿ !
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದು, 9 ಸಮನ್ಸ್ ಕೊಟ್ಟರೂ ಅವರು ತನಿಖೆಗೆ ಹಾಜರಾಗಿರಲಿಲ್ಲ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜಾರಿ ನಿರ್ದೇಶನಾಲಯದ(Enforcement Directorate) ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದಾರೆ. ಅಕ್ರಮ ಮದ್ಯ ನೀತಿ ಹಗರಣ ಪ್ರಕರಣದಲ್ಲಿ(Delhi Liquor Policy Scam Case) ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸತತ 9 ಸಮನ್ಸ್ ಕಳುಹಿಸಿದ ಇಡಿ ತಂಡ ಗುರುವಾರ ಸಂಜೆ 10ನೇ ಸಮನ್ಸ್ ನೊಂದಿಗೆ ಕೇಜ್ರಿವಾಲ್ ಮನೆಗೆ ತಲುಪಿತ್ತು. ಸಿಎಂ ನಿವಾಸದಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಈ ವೇಳೆ ಇಡಿ ಜಂಟಿ ನಿರ್ದೇಶಕ ಕಪಿಲ್ ರಾಜ್ ಕೂಡ ಕೇಜ್ರಿವಾಲ್ ನಿವಾಸದಲ್ಲಿ ಹಾಜರಿದ್ದರು. ಕೇಜ್ರಿವಾಲ್ ಅವರ ಹೇಳಿಕೆಯನ್ನು ಪಿಎಂಎಲ್‌ಎ ಸೆಕ್ಷನ್ 50 ರ ಅಡಿಯಲ್ಲಿ ದಾಖಲಿಸಿದ ಬೆನ್ನಲ್ಲಿಯೇ ಅವರನ್ನು ಬಂಧಿಸಲಾಯಿತು. ಸಿಎಂ ಕೇಜ್ರಿವಾಲ್ ಅಧಿಕಾರದಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಸಿಎಂ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಮೂಲ ಬೇರು ಮರೆತಿಲ್ಲ ಅಣ್ಣಾವ್ರ ಮೊಮ್ಮಗ..!ಗಾಜನೂರಿನ ಅಣ್ಣಾವ್ರ ಮನೆಯಲ್ಲಿ ಯುವ ಸಂದರ್ಶನ..!