ಪಾಕಿಸ್ತಾನ ಜಿಂದಾಬಾದ್ ಗ್ರೂಪ್, ಭಾರತ ವಿರೋಧಿ ಚಟುವಟಿಕೆ ತಾಣವಾಯ್ತಾ ಕರ್ನಾಟಕ?

ಪಾಕಿಸ್ತಾನ ಧ್ವಜವನ್ನು ಡಿಪಿಯಾಗಿ ಬಳಸಲಾಗಿದೆ. ಪಾಕ್ ಜಿಂದಾಬಾಬ್, ಇಂಡಿಯಾ ಮುರ್ದಾಬಾದ್ ಗ್ರೂಪ್ ಆರಂಭಿಸಿ, ಭಾರತ ವಿರೋಧಿ ಚಟುವಟಿಕೆ ಕಾರ್ಯಗಳು ಸದ್ದಿಲ್ಲದೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ನಡೆದಿರುವುದು ಕರ್ನಾಟಕದಲ್ಲಿ. 
 

Share this Video
  • FB
  • Linkdin
  • Whatsapp

ಸ್ವಾತಂತ್ರ್ಯ ದಿನಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಿರಂಗ ಡಿಪಿ ಹಾಕುವಂತೆ ಮೋದಿ ಮನವಿ ಮಾಡಿದ್ದರು. ಆದರೆ ಕರ್ನಾಟಕದ ಅದರಲ್ಲೂ ಬೆಂಗಳೂರಿನಲ್ಲಿ ಕೆಲವರು ಕ್ಲಬ್ ಹೌಸ್‌ನಲ್ಲಿ ಪಾಕಿಸ್ತಾನ ಜಿಂದಾಬ್‌ಬಾದ್, ಇಂಡಿಯಾ ಮುರ್ದಾಬಾದ್ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇಷ್ಟೇ ಅಲ್ಲ ತಮ್ಮ ಡಿಪಿಗಳನ್ನು ಪಾಕಿಸ್ತಾನ ಧ್ವಜ ಹಾಕಿಕೊಂಡಿದ್ದಾರೆ. ಇಷ್ಟಾದರೂ ಬೆಂಗಳೂರಿನಲ್ಲಾಗಲಿ, ಕರ್ನಾಟಕದಲ್ಲಿ ಪ್ರಕರಣ ದಾಖಲಾಗಿಲ್ಲ. ಇತ್ತ ವೀರ ಸಾವರ್ಕರ್ ಫೋಟೋ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೊಸ ವಿವಾದ ಸೃಷ್ಟಿಸಿದ್ದಾರೆ. ಮುಸ್ಲಿಮ್ ಏರಿಯಾದಲ್ಲಿ ವೀರ ಸಾವರ್ಕರ್ ಫೋಟೋ ಹಾಕಿದ್ದು ಯಾಕೆ ಎಂದು ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿದ್ದು ಮಾತಿಗೆ ಸಿಟಿ ರವಿ ಸೇರಿದಂತೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಸಿದ್ದು ಹೇಳಿಕೆ ಇದೀಗ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Related Video