ಉಡುಪಿ ವಿಡಿಯೋ ಪ್ರಕರಣ: ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಟಿಸಿ ಕೊಡುತ್ತಾ ಕಾಲೇಜು..?
ತನಿಖೆ ಪೂರ್ಣಗೊಳ್ಳುವವರೆಗೂ ಟಿಸಿ ಪಡೆಯದೇ ಇರಲು ತೀರ್ಮಾನ
ಟಿಸಿ ಪಡೆಯಲು ನಿರಾಕರಿಸಿದ್ದಕ್ಕೆ ಅಮಾನತು ಮಾಡಿದ ಆಡಳಿತ ಮಂಡಳಿ
ಮುಸ್ಲಿಂ ವಿದ್ಯಾರ್ಥಿನಿಯರ ಡಿಬಾರ್ ಮಾಡಲು ಬಾಕಿ ವಿದ್ಯಾರ್ಥಿಗಳ ಒತ್ತಡ
ಉಡುಪಿ: ಕಾಲೇಜು ಶೌಚಾಲಯದಲ್ಲಿ ಸಹಪಾಠಿಗಳಾದ ಹಿಂದೂ ಯುವತಿಯರ ವಿಡಿಯೋ ಮಾಡಿದ್ದ ಪ್ರಕರಣಕ್ಕೆ(video case) ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ(muslim students TC) ತೆಗೆದುಕೊಂಡು ಹೋಗುವಂತೆ ಸೂಚಿಸಿದ್ರು, ಪಡೆದಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ ಆರೋಪಿತ ವಿದ್ಯಾರ್ಥಿನಿಯರ ಬಗ್ಗೆ ಕಾಲೇಜು ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ತಿಳಿದಿಲ್ಲ. ವಿವಾದದ ಬಳಿಕ ಟಿಸಿ ಪಡೆದು ತೆರಳುವಂತೆ ಆಡಳಿತ ಮಂಡಳಿ ಸೂಚಿಸಿತ್ತು. ಆದ್ರೆ ಇಷ್ಟು ದಿನವಾದರೂ ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದಿಲ್ಲ. ಟಿಸಿ ಪಡೆದರೆ ತಪ್ಪು ಒಪ್ಪಿಕೊಂಡತಾಗುತ್ತೆ ಎಂದು ವಿದ್ಯಾರ್ಥಿನಿಯರ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿನಿಯರನ್ನ ಡಿಬಾರ್ ಮಾಡುತ್ತಾ..? ಅಥವಾ ಟಿಸಿ ಕೊಡುತ್ತಾ..? ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ನೇತ್ರಾಜ್ಯೋತಿ ಕಾಲೇಜು ಆಡಳಿತ ಮಂಡಳಿ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ. ಕಾದು ನೋಡುವ ತಂತ್ರವನ್ನು ಮುಸ್ಲಿಂ ವಿದ್ಯಾರ್ಥಿನಿಯರು ಅನುಸರಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಜವಾಬ್ದಾರಿ ಯಾರಿಗೆ ಕೊಡಬೇಕು ಅಂತಾ ಪಕ್ಷ ನಿರ್ಧರಿಸುತ್ತದೆ: ಸಿ.ಟಿ.ರವಿ